47
ರಾಷ್ಟ್ರೀಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಮುಗುಪ್ಪು ಕೂಸಪ್ಪ ಗೌಡ ಆಯ್ಕೆ; ಮಾ.15ರಂದು ಬೆಂಗಳೂರಿನಲ್ಲಿ ಸನ್ಮಾನ
ಅಂತರಾಷ್ಟ್ರೀಯಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜ ಸೇವೆ ಮತ್ತು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ನೀಡಲಾಗುವ ರಾಷ್ಟ್ರೀಯ ನಾಡಪ್ರಭು ಕೆಂಪೆಗೌಡ ಪ್ರಶಸ್ತಿಗೆ ಮುಪ್ಪೇರ್ಯ ಗ್ರಾಮದ ಮುಗುಪ್ಪು ಕೂಸಪ್ಪ ಗೌಡ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ 15 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪ್ರತಿಫಲ ಫೌಂಡೇಶನ್ ಧಾರವಾಡ, ಸತ್ವಾ ಫೌಂಡೇಶನ್ ಕರ್ನಾಟಕ ಹಾಗೂ ಚಿರಾಯು ಕನ್ನಡ ವಾಹಿನಿ ಇವರ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಸಮಾಜ ಸೇವೆ ಮತ್ತು ಸಹಕಾರ ಕ್ಷೇತ್ರದಲ್ಲಿ ಮುಗುಪ್ಪು ಕೂಸಪ್ಪ ಗೌಡ ಅವರು ನೀಡಿರುವ ಸೇವೆಯನ್ನು ಪರಿಗಣಿಸಿ ಸಂಘಟಕರು ಈ ಗೌರವಕ್ಕೆ ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.