ಬಂಟ್ವಾಳ: ದೇವಿನಗರ ,ದಡ್ಡಲಕಾಡು ಮೂಡನಡುಗೋಡು ಗ್ರಾಮದ ಶ್ರೀ ಜಗದಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಚಂಡಿಕಾಯಾಗ ಹಾಗೂ ಪರಿವಾರ ದೇವರ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 30ರಿಂದ ಏಪ್ರಿಲ್ 04, 2026ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.
ಕಾರ್ಯಕ್ರಮದ ವಿವರಗಳು:
ಮಾರ್ಚ್ 30 (ಸೋಮವಾರ): ಸಂಜೆ 3.30ರಿಂದ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕ್ಷೇತ್ರಕ್ಕೆ ಭವ್ಯ ‘ಹಸಿರುವಾಣಿ ಹೊರೆಕಾಣಿಕೆ’ ಮೆರವಣಿಗೆ ಸಾಗಲಿದೆ.
ಮಾರ್ಚ್ 31 (ಮಂಗಳವಾರ): ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ.
ಏಪ್ರಿಲ್ 01 (ಬುಧವಾರ): ಬೆಳಿಗ್ಗೆ ಗಣಯಾಗ, ನವಗ್ರಹ ಹವನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಸ್ಥಳೀಯ ಪ್ರತಿಭೆಗಳಿಂದ ‘ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಏಪ್ರಿಲ್ 02 (ಗುರುವಾರ): ಈ ದಿನದ ಪ್ರಮುಖ ಆಕರ್ಷಣೆಯಾಗಿ ಬೆಳಿಗ್ಗೆ 9.40ರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೇವರ ಬಿಂಬ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಜೀವರತ್ನ ಕಲಶಾಭಿಷೇಕಗಳು ನಡೆಯಲಿವೆ. ರಾತ್ರಿ ಪ್ರಖ್ಯಾತ ಕಲಾವಿದರಿಂದ ‘ಎಲ್ಲೆ ದಾದ’ ಏರೆಗ್ ಗೊತ್ತು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 03 (ಶುಕ್ರವಾರ): ಬೆಳಿಗ್ಗೆ ಶ್ರೀ ಚಂಡಿಕಾ ಹವನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ 8.30ಕ್ಕೆ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಭಗವತಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ಜರುಗಲಿದೆ.
ಏಪ್ರಿಲ್ 04 (ಶನಿವಾರ): ರಾತ್ರಿ 8.00 ಗಂಟೆಗೆ ಶ್ರೀ ಮಹಮ್ಮಾಯಿ ಗುಳಿಗ ಸಾನ್ನಿಧ್ಯದಲ್ಲಿ ‘ಮಾರಿ ಪೂಜಾ ಉತ್ಸವ’ ದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.