59
ಪುಣ್ಚತ್ತಾರು: ಕರಿಮಜಲುನಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ ಯಶಸ್ವಿ
ಪುಣ್ಚತ್ತಾರು: ಕರಿಮಜಲು ವಿಷ್ಣುಪುರದಲ್ಲಿರುವ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ ಧಾರ್ಮಿಕ ಕಾರ್ಯಕ್ರಮವು ಎಪ್ರಿಲ್ 3 ಮತ್ತು 4ರಂದು ಭಕ್ತಿಭಾವದಿಂದ ನಡೆಯಿತು.

ಈ ಅಂಗವಾಗಿ ಎಪ್ರಿಲ್ 2ರಂದು ವಿವಿಧ ಪ್ರದೇಶಗಳಿಂದ ಹಸಿರು ಕಾಣಿಕೆ ಸಂಗ್ರಹಿಸಿ, ಭಕ್ತರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಸ್ಥಳೀಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಮುಖ್ಯ ದಿನಗಳಲ್ಲಿ ವಿವಿಧ ಪೂಜಾ ವಿಧಿವಿಧಾನಗಳು, ಧಾರ್ಮಿಕ ಆಚರಣೆಗಳು ನೆರವೇರಿದ್ದು, ಭಕ್ತರು ದೈವದ ಆಶೀರ್ವಾದ ಪಡೆದರು. ಕಾರ್ಯಕ್ರಮವು ಶಿಸ್ತಿನಿಂದ ಹಾಗೂ ಸಂಪ್ರದಾಯಬದ್ಧವಾಗಿ ನಡೆದಿದ್ದು, ಭಕ್ತರಲ್ಲೂ ಅಪಾರ ಸಂತೋಷ ಮೂಡಿಸಿತು.