Home ದೇಶಮಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: ಭಾರತದಲ್ಲಿ 50,000 ನೇಮಕಾತಿಗೆ ಮುಂದಾದ ಡೆಲಾಯ್ಟ್!

ಮಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: ಭಾರತದಲ್ಲಿ 50,000 ನೇಮಕಾತಿಗೆ ಮುಂದಾದ ಡೆಲಾಯ್ಟ್!

by Editor

ಮಂಗಳೂರಿನ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಜಾಗತಿಕ ವೃತ್ತಿಪರ ಸೇವೆಗಳ ದೈತ್ಯ ಸಂಸ್ಥೆ ಡೆಲಾಯ್ಟ್ (Deloitte) ಶೀಘ್ರದಲ್ಲೇ ಕರಾವಳಿ ನಗರಿಗೆ ಪಾದಾರ್ಪಣೆ ಮಾಡಲಿದೆ. ಈ ಕುರಿತು ಮಾಹಿತಿ ನೀಡಿದ ಡೆಲಾಯ್ಟ್ ದಕ್ಷಿಣ ಏಷ್ಯಾದ ಸಿಇಒ ರೋಮಲ್ ಶೆಟ್ಟಿ, ಸಂಸ್ಥೆಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶಾಖೆ ತೆರೆಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, “ಮಂಗಳೂರಿಗೆ ಡೆಲಾಯ್ಟ್ ಬರುವುದು ಖಚಿತ, ಇದು ಕೇವಲ ಸಮಯದ ಪ್ರಶ್ನೆಯಷ್ಟೇ” ಎಂದು ಸ್ಪಷ್ಟಪಡಿಸಿದ್ದಾರೆ. ಎರಡನೇ ಹಂತದ ನಗರಗಳ ಬೆಳವಣಿಗೆಗೆ ಒತ್ತು ನೀಡುತ್ತಿರುವ ಸಂಸ್ಥೆಯು, ಮಂಗಳೂರಿನಲ್ಲಿರುವ ಶ್ರೇಷ್ಠ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರತಿಭೆಗಳನ್ನು ಬಳಸಿಕೊಳ್ಳಲು ಉತ್ಸುಕವಾಗಿದೆ. ಈ ಬೆಳವಣಿಗೆಯಿಂದಾಗಿ ಸ್ಥಳೀಯ ಪ್ರತಿಭೆಗಳಿಗೆ ತಮ್ಮೂರಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳು ದೊರೆಯಲಿವೆ.

You may also like

Leave a Comment