ಪೊಲೀಸ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: 3,395 ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜೂನ್ 6: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಕರಿಗೆ ರಾಜ್ಯ ಸರ್ಕಾರದಿಂದ ಸುವರ್ಣಾವಕಾಶ ದೊರೆತಿದೆ. ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯಲ್ಲಿನ 3,395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಮಿಕ್ಕುಳಿದ ವೃಂದ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಜೂನ್ 8ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಈ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿಶೇಷ ಸಡಿಲಿಕೆ ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಜೂನ್ 08, 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 03, 2026
- ಶುಲ್ಕ ಪಾವತಿಗೆ ಕೊನೆಯ ದಿನ: ಜುಲೈ 04, 2026
- ಲಿಖಿತ ಪರೀಕ್ಷೆ: ಆಗಸ್ಟ್ 02, 2026
ವಿದ್ಯಾರ್ಹತೆ
ಮಾನ್ಯತೆ ಪಡೆದ ಮಂಡಳಿಯಿಂದ PUC / 12ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ನಿಬಂಧನೆಗಳ ಅನ್ವಯ ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹37,500 ರಿಂದ ₹76,100 ವರೆಗೆ ವೇತನ ದೊರೆಯಲಿದೆ.
ವಯೋಮಿತಿ
- ಸಾಮಾನ್ಯ ವರ್ಗ (GM): 33 ವರ್ಷ
- SC/ST ಹಾಗೂ 2A, 2B, 3A, 3B: 35 ವರ್ಷ
- ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳು: 38 ವರ್ಷ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ:
- ಲಿಖಿತ ಪರೀಕ್ಷೆ
- ದೈಹಿಕ ಸಹಿಷ್ಣುತೆ ಮತ್ತು ಪ್ರಮಾಣಿತ ಪರೀಕ್ಷೆ (ET & PST)
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ
- GM, 2A, 2B, 3A, 3B: ₹750
- SC/ST ಹಾಗೂ ಪ್ರವರ್ಗ-1: ₹500
ಅಭ್ಯರ್ಥಿಗಳು ಜುಲೈ 3ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವಂತೆ ಸೂಚಿಸಲಾಗಿದೆ.