Home Uncategorizedಚಿನ್ನ-ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ

ಚಿನ್ನ-ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ

by anamika

ಚಿನ್ನ-ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ: 24 ಕ್ಯಾರೆಟ್ 10 ಗ್ರಾಂ ₹1.51 ಲಕ್ಷ ದಾಟಿತು

ಭಾರತ: ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಗಳು ಹಾಗೂ ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೊಮ್ಮೆ ಭಾರೀ ಏರಿಕೆ ಕಂಡುಬಂದಿದೆ. ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಚಿನ್ನವನ್ನು ಪರಿಗಣಿಸಲಾಗುತ್ತಿರುವ ಹಿನ್ನೆಲೆ, ಹಳದಿ ಲೋಹದ ಬೆಲೆ ಗಗನಮುಖಿಯಾಗಿದೆ.

ಏಪ್ರಿಲ್ 1, 2026 ಬುಧವಾರದಂದು 24 ಕ್ಯಾರೆಟ್ ಚಿನ್ನದ ದರದಲ್ಲಿ 10 ಗ್ರಾಂಗೆ ₹1,970ರಷ್ಟು ಏರಿಕೆ ಕಂಡುಬಂದಿದ್ದು, ₹1,51,480ಕ್ಕೆ ತಲುಪಿದೆ. ಅದೇ ರೀತಿ 1 ಗ್ರಾಂ ಚಿನ್ನದ ಬೆಲೆ ₹197 ಹೆಚ್ಚಳವಾಗಿ ₹15,148ಕ್ಕೆ ದಾಖಲಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಏರಿಕೆ ಕಂಡುಬಂದಿದ್ದು, 1 ಗ್ರಾಂಗೆ ₹180 ಹೆಚ್ಚಳವಾಗಿ ₹13,885 ಆಗಿದೆ. 10 ಗ್ರಾಂಗೆ ₹1,800 ಏರಿಕೆಯಾಗಿ ₹1,38,850ಕ್ಕೆ ತಲುಪಿದೆ.

ಜಾಗತಿಕ ಅನಿಶ್ಚಿತತೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿಯೂ ಚಿನ್ನ-ಬೆಳ್ಳಿ ದರಗಳಲ್ಲಿ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

You may also like

Leave a Comment