Home Uncategorizedಶಿಕ್ಷಣಕ್ಕೆ ವಯಸ್ಸಿಲ್ಲ: ಬಂಟ್ವಾಳದ ತಾಯಿ-ಮಗಳು ಪಿಯುಸಿಯಲ್ಲಿ ಯಶಸ್ಸು

ಶಿಕ್ಷಣಕ್ಕೆ ವಯಸ್ಸಿಲ್ಲ: ಬಂಟ್ವಾಳದ ತಾಯಿ-ಮಗಳು ಪಿಯುಸಿಯಲ್ಲಿ ಯಶಸ್ಸು

by anamika

🔰 ಪಿಯುಸಿ ಫಲಿತಾಂಶ: ಬಂಟ್ವಾಳದಲ್ಲಿ ತಾಯಿ-ಮಗಳ ಅಪರೂಪದ ಸಾಧನೆ 🔰

ಬಂಟ್ವಾಳ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಂಟ್ವಾಳದ ಬಿ.ಸಿ. ರೋಡ್ ನಿವಾಸಿಗಳಾದ ತಾಯಿ-ಮಗಳು ಜೋಡಿ ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ನೇತ್ರಾವತಿ ಮತ್ತು ಅವರ ಪುತ್ರಿ ಹೇಮಶ್ರೀ ಒಂದೇ ವೇಳೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಅಪರೂಪದ ಸಾಧನೆಗೆ ಕಾರಣರಾಗಿದ್ದಾರೆ.

ಗೃಹಿಣಿಯಾಗಿರುವ ನೇತ್ರಾವತಿ ಅವರು ಶಿಕ್ಷಣದ ಮೇಲಿನ ಆಸೆಯನ್ನು ಮುಂದುವರಿಸಿಕೊಂಡು ಪರೀಕ್ಷೆ ಬರೆದು ಯಶಸ್ಸು ಸಾಧಿಸಿದ್ದು, ಮಹಿಳೆಯರಿಗೂ ಶಿಕ್ಷಣದಲ್ಲಿ ಯಾವುದೇ ವಯೋಮಿತಿ ಅಡ್ಡಿಯಾಗುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಇತ್ತ ಪುತ್ರಿ ಹೇಮಶ್ರೀ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ಬಿ. ಮೂಡ ಸರ್ಕಾರಿ ಕಾಲೇಜಿನಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ತಾಯಿ-ಮಗಳ ಈ ಸಾಧನೆ ಜಿಲ್ಲೆಯಲ್ಲಿ ಮಾದರಿಯಾಗಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

 

You may also like

Leave a Comment