🔰 ಮೂಡಬಿದಿರೆಯಲ್ಲಿ ಇಂದು ಜಿಲ್ಲಾ ವಾಲಿಬಾಲ್ ಚಾಂಪಿಯನ್‌ಶಿಪ್ 2026: ಸುಳ್ಯದಿಂದ ಎರಡು ತಂಡಗಳ ಭಾಗಿ 🔰
ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ (ರಿ), ಮಂಗಳೂರು ಹಾಗೂ ಮೂಡಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಇಂದು ನಲ್ಲಿ ಜಿಲ್ಲಾ ವಾಲಿಬಾಲ್ ಚಾಂಪಿಯನ್‌ಶಿಪ್ 2026 ಪಂದ್ಯಾವಳಿ ನಡೆಯುತ್ತಿದೆ.
ಈ ಸ್ಪರ್ಧೆಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ವತಿಯಿಂದ ಪುರುಷರ ಮತ್ತು ಮಹಿಳೆಯರ ತಲಾ ಒಂದು ತಂಡ ಭಾಗವಹಿಸುತ್ತಿದ್ದು, ತಂಡಗಳಿಗೆ ಶುಭ ಹಾರೈಸಿ ಕಲರ್ಸ್ ಹಸ್ತಾಂತರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯದ ಕೆವಿಜಿ ಕಚೇರಿಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಅಧ್ಯಕ್ಷತೆ ವಹಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಹಾಗೂ ಸಂಘಟಿತ ಸ್ಪರ್ಧೆಯ ಮಹತ್ವವನ್ನು ಒತ್ತಿ ಹೇಳಿದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಕೂಡ ಶುಭ ಹಾರೈಸಿದರು.

ಶ್ರೀ ದೇವಿ ಸ್ಟ್ರೈಕರ್ಸ್ ದೊಡ್ಡಡ್ಕದ ರಕ್ಷಿತ್ ದೊಡ್ಡಡ್ಕ ಹಾಗೂ ಉದ್ಯಮಿ ಜಗದೀಶ್ ಸರಳಿಕುಂಜ ತಂಡಗಳಿಗೆ ಕಲರ್ಸ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆ.ಎಂ. ಮುಸ್ತಫಾ, ಕೆ.ಬಿ. ಇಬ್ರಾಹಿಂ, ನಿತಿನ್ ಕೆ.ಆರ್., ಕೆ. ಗೋಕುಲ್ ದಾಸ್, ರಜ್ಜು ಭಯ್ಯ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ರಾಜು ಪಂಡಿತ್, ಪ್ರಭಾಕರ ನಾಯರ್ ಮಧುವನ ಸೇರಿದಂತೆ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸುಳ್ಯ ತಂಡಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತವಾಗಿದೆ.