🔰 ಮಂಗಳೂರು: “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ಬಿಡುಗಡೆ 🔰
ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ, ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ಮೂಡಿಬಂದ “90 ಎಮ್ ಎಲ್” ತುಳು ಚಲನಚಿತ್ರ ಶುಕ್ರವಾರ ಭಾರತ್ ಸಿನಿಮಾಸ್‌ನಲ್ಲಿ ಭರ್ಜರಿಯಾಗಿ ತೆರೆ ಕಂಡಿತು.
ಚಿತ್ರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೈದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ಮಾತನಾಡಿ, “ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ನಿರಂತರವಾಗಿ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ. ‘90 ಎಮ್ ಎಲ್’ ಸಿನಿಮಾ ಪ್ರೇಕ್ಷಕರ ಮನೆಮಾತಾಗಲಿ, ಚಿತ್ರತಂಡಕ್ಕೆ ಯಶಸ್ಸು ದೊರಕಲಿ” ಎಂದು ಶುಭಹಾರೈಸಿದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, “ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ. ಮಲಯಾಳಂ ಶೈಲಿಯ ಸ್ಪರ್ಶ ಕಂಡುಬರುತ್ತಿದ್ದು, ಟೈಟಲ್ ಕೂಡ ವಿಭಿನ್ನವಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ” ಎಂದರು.
ಲಂಚುಲಾಲ್ ಕೆ.ಎಸ್. ಅವರು, “ಟೈಟಲ್ ವಿಭಿನ್ನವಾಗಿದೆ. ತುಳುವರು ಈ ಸಿನಿಮಾವನ್ನು ಬೆಂಬಲಿಸಿದರೆ ಖಂಡಿತ ಯಶಸ್ಸು ಸಾಧಿಸುತ್ತದೆ” ಎಂದರು. ನಟ ಅರ್ಜುನ್ ದೇವ್, “ಸಿನಿಮಾ ನಿಜ ಜೀವನದಿಂದ ದೂರವಿದ್ದರೂ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಡೋಲ್ಪಿ ಡಿ ಸೋಜ, ಸ್ವರಾಜ್ ಶೆಟ್ಟಿ, ಸಿದ್ಧಾರ್ಥ್, ತ್ರಿಶೂಲ್ ಶೆಟ್ಟಿ, ಆನಂದ್ ಕುಂಪಲ, ಜಗನ್ನಾಥ ಶೆಟ್ಟಿ ಬಾಳ, ಮೋಹನ್ ಕೊಪ್ಪಲ, ವಿನೀತ್ ಕುಮಾರ್, ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಶೈಲಶ್ರೀ, ಧೃತಿ, ನಿರ್ದೇಶಕ ರಂಜಿತ್ ಸಿ ಬಜಾಲ್, ತುಳಸಿದಾಸ್ ಮಂಜೇಶ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿ.ಜೆ. ಮಧುರಾಜ್ ನಿರೂಪಿಸಿದರು.
📽️ ಚಿತ್ರದ ವಿಶೇಷತೆಗಳು:
“90 ಎಮ್ ಎಲ್” ಸಿನಿಮಾ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಪಡುಬಿದ್ರೆ, ಸುರತ್ಕಲ್, ಕಾರ್ಕಳ, ದೇರಳಕಟ್ಟೆ ಸೇರಿದಂತೆ ಕರಾವಳಿ ಭಾಗದ ಹಲವು ಪ್ರದೇಶಗಳಲ್ಲಿ ಬಿಡುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ನಮಿತ, ಶೈಲಾಶ್ರೀ, ಧೃತಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ರಂಜಿತ್ ಸಿ ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ಸಚಿನ್ ರಾಮ್ ಹಾಗೂ ಡಿಸೈನ್ ಆಚಾರ್ಯ ಗುರು ಅವರದು.
🎬 ಹಾಸ್ಯ ಮನರಂಜನೆಯೊಂದಿಗೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೊಂದಿರುವ “90 ಎಮ್ ಎಲ್” ಸಿನಿಮಾ ಕರಾವಳಿ ಭಾಗದ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.