Home Uncategorizedಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.11ರಷ್ಟು ಜಿಗಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.11ರಷ್ಟು ಜಿಗಿತ

by anamika

🔰 ಅಮೆರಿಕ–ಇರಾನ್ ಮಾತುಕತೆ ವಿಫಲ: ತೈಲ ಬೆಲೆ ರಾಕೆಟ್ ಏರಿಕೆ 🔰

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಕೆ ಕಂಡಿವೆ. ನಿರೀಕ್ಷೆಯಂತೆ ಕ್ರೂಡ್ ಆಯಿಲ್ ಬೆಲೆಗಳು ಮತ್ತೆ 100 ಡಾಲರ್ ಗಡಿ ದಾಟಿದ್ದು, ಸೋಮವಾರ ಒಂದೇ ದಿನದಲ್ಲಿ ಶೇ. 11ರಷ್ಟು ಏರಿಕೆಯಾಗಿದೆ.

ಡಬ್ಲ್ಯುಟಿಐ (WTI) ಫ್ಯೂಚರ್ಸ್‌ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 104.25 ಡಾಲರ್‌ಗೆ ಏರಿದರೆ, ಬ್ರೆಂಟ್ ಕ್ರೂಡ್ ಬೆಲೆ ಸುಮಾರು 101 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಈ ಏರಿಕೆಗೆ ಅಮೆರಿಕ–ಇರಾನ್ ಮಾತುಕತೆ ಮುರಿದುಬಿದ್ದದ್ದೇ ಪ್ರಮುಖ ಕಾರಣವಾಗಿದ್ದರೂ, ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕುವ ಸಾಧ್ಯತೆಗಳೂ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿವೆ. ಈ ಪ್ರದೇಶ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಯಾವುದೇ ಉದ್ವಿಗ್ನತೆ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ತೈಲ ಬೆಲೆ ಏರಿಕೆಯಿಂದ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇಂಧನ ದರಗಳು ಹಾಗೂ ದೈನಂದಿನ ಬಳಕೆ ವಸ್ತುಗಳ ಬೆಲೆಗಳ ಮೇಲೂ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

You may also like

Leave a Comment