ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ಐತ್ತೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ,ಭಜನಾಪರಿಷತ್ ಪಧಾದಿಕಾರಿಗಳಿಗೆˌ ನವಜೀವನ ಸಮಿತಿ ಸದಸ್ಯರುಗಳಿಗೆ ಹಾಗೂ ಜನಜಾಗೃತಿ ಪಧಾದಿಕಾರಿಗಳಿಗೆ ವಿವಿಧ ಆಟೋಟ ಸ್ಪರ್ದೆಯು ಮರ್ಧಾಳ ಮಿತ್ತಮಜಲು ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಸುಂಕದಕಟ್ಟೆ ವಲಯ ಅರಣ್ಶಾಧಿಕಾರಿ ಯೋಗೀಶ್ ಜಿ ಸಿ ಯವರು ಮಾತನಾಡಿ ಮಾನವನ ಜೀವನದಲ್ಲಿ ಹಣಗಳಿಸುವುದೇ ಕಾಯಕವಲ್ಲ… ಮನಸ್ಸಿಗೆ ಹಿತ ಎಣಿಸುವ ಒಂದಷ್ಟು ಚಟುವಟಿಕೆಯನ್ನು ಮಾಡುವುದರಿಂದ ಆರೋಗ್ಶ ವೃದ್ದಿಯಾಗುತ್ತದೆ…ಮನಸ್ಸಿನ ಧಣಿವನ್ನು ಕಡಿಮೆ ಗೊಳಿಸಲು ಕ್ರೀಡೆಯೂ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಧರ್ಮಸ್ಥಳ ಯೋಜನೆಯ ವತಿಯಿಂದ ಏರ್ಪಡಿಸಿರುವ ಆಟೋಟ ಸ್ಪರ್ಧೆಯು ಯೋಜನೆಯ ಪಾಲುದಾರರಿಗೆ ಸಿಕ್ಕಿರುವ ಉತ್ತಮ ಅವಕಾಶ ತಮ್ಮ ಪ್ರತಿಬೆಯನ್ನು ಪ್ರದರ್ಶಿಸಲು ಎಲ್ಲರೂ ಪಾಲ್ಗೊಳ್ಳುವಂತೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ಶನೀಶ್ವರ ಪೂಜಾ ವ್ಶವಸ್ಥಾಪನಾ ಸಮಿತಿಯ ಗೌರವಾಧ್ಶಕ್ಷರಾದ ವಾಸುದೇವ ಭಟ್ ಕಡ್ಶ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಭಜನಾಪರಿಷತ್ ಗೌರವ ಸಲಹೆಗಾರರಾದ ಸತ್ಯನಾರಾಯಣ ಹೆಗ್ಡೆ ನಡುಮಜಲುˌ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ˌ ಐತ್ತೂರು ಗ್ರಾಮಪಂಚಾಯತ್ ಅಧ್ಶಕ್ಷೇ ವತ್ಸಲಾ ˌ ಮಿತ್ತೋಡಿ ಕ್ರೀಡಾಂಗಣದ ಮಾಲಕ ವಿನಯ ಪೂಜಾರಿˌ ಸಾಮೂಹಿಕ ಶ್ರೀ ಶನೀಶ್ಟರ ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಅತ್ಯಡ್ಕˌ ,ಬಂಟ್ರ ಒಕ್ಕೂಟದ ಅಧ್ಯಕ್ಷ ಸತೀಶ್ಟಂದ್ರ ರೈ ಮೈಕಾಜೆˌ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಿವಪ್ರಸಾದ್ ರೈ ಮೈಲೇರಿˌ ಮರ್ಧಾಳ ಶೌರ್ಯ ಘಟಕದ ಘಟಕ ಪ್ರತಿನಿಧಿ ಭವಾನಿಶಂಕರ ಮೇಲಂಟ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜಿಲ್ಲಾ ನಿರ್ಧೇಶಕರಾದ ಬಾಬುನಾಯ್ಕ ಎ ಯವರು ಹಗ್ಗಜಗ್ಗಾಟ ಸ್ಪರ್ದೆಯನ್ನು ಉಧ್ಘಾಟಿಸಿ ಶುಭಹಾರೈಸಿದರು.
ಕ್ರೀಡಾ ಕೂಟ ಉಧ್ಘಾಟನ ಕಾರ್ಯಕ್ರಮದಲ್ಲಿ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿˌ ಐತ್ತೂರು ವಲಯ ಮೇಲ್ವೀಚಾರಕ ಸೋಮೇಶ್ ವಿರುಪಾಕ್ಷಪ್ಪ ಮರಭಾ ಶೆಟ್ಟಿ ವಂದಿಸಿದರು.ಸೇವಾಪ್ರತಿನಿಧಿ ಸತೀಶ್ ಆಜಾನ ಕಾರ್ಯಕ್ರಮ ನಿರೂಪಿಸಿದರು.
ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಶೇಕ ಪ್ರತ್ಯೇಕವಾಗಿ ಹಗ್ಗಜಗ್ಗಾಟˌ ಲಿಂಬೆಚಮಚ ಓಟˌ ನಿಧಾನ ದ್ವಿಚಕ್ರವಾಹನ ಚಾಲನೆˌ ಬಲೂನ್ ಒಡೆಯುವ ಸ್ಪರ್ದೆˌ ಸಂಗೀತ ಕುರ್ಚಿˌ ಪಟ್ಟಣಕ್ಕೆ ಬಾಂಬ್ ಸ್ಪರ್ದೆˌಹಾಗೂ ಗುಂಡೆಸೆತ ಸ್ಪರ್ದೆಯು ನಡೆಯಿತು.
ದಿನಾಂಕ 31/01/2026ರಂದು ಮರ್ಧಾಳ ಅಯ್ಶಪ್ಪಸ್ವಾಮಿ ಭಜನಾಮಂದಿರದಲ್ಲಿ ಸಾಮೂಹಿಕ ಶ್ರೀ ಶನೇಶ್ವರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಹೂಗುಚ್ಚ ಕಟ್ಟುವ ಸ್ಪರ್ಧೆಯು ನಡೆಯಲಿದೆ.
ಕ್ರೀಡಾ ಕೂಟದ ನಿರ್ವಹಣೆಯನ್ನು ಶಿವಪ್ರಸಾದ್ ರೈ ಮೈಲೇರಿ ಯವರು ನಿರೂಪಿಸಿದರು.ವಲಯದ ಸೇವಾಪ್ರತಿನಿಧಿಗಳಾದ ವಿನೋದ್ ಕೆ.ಸಿˌದಿನೇಶ್ ಕುಮಾರ್ˌಬೇಬಿˌಭವ್ಯಶ್ರೀˌ ಜ್ಞಾನ ಸೇಲ್ವೀˌ ನೇತ್ರˌ ಹಾಗೂ ರೇಖಾ ರವರು ಕ್ರೀಡಾ ಕೂಟಕ್ಕೆ ಸಹಕರಿಸಿದರು.ವಲಯದ ಒಕ್ಕೂಟದ ಅಧ್ಯಕ್ಷರುಗಳು ಪಧಾದಿಕಾರಿಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.