Home HISTORYಬೆಳ್ಳಿಚಡವಿನಲ್ಲಿ ಶೀಘ್ರದಲ್ಲೇ ಯಕ್ಷಗಾನ ತರಗತಿ ಪುನರಾರಂಭ; ಆಸಕ್ತರಿಂದ ನೋಂದಣಿಗೆ ಆಹ್ವಾನ

ಬೆಳ್ಳಿಚಡವಿನಲ್ಲಿ ಶೀಘ್ರದಲ್ಲೇ ಯಕ್ಷಗಾನ ತರಗತಿ ಪುನರಾರಂಭ; ಆಸಕ್ತರಿಂದ ನೋಂದಣಿಗೆ ಆಹ್ವಾನ

by anamika

ಬೆಳ್ಳಿಚಡವಿನಲ್ಲಿ ಶೀಘ್ರದಲ್ಲೇ ಯಕ್ಷಗಾನ ತರಗತಿ ಪುನರಾರಂಭ; ಆಸಕ್ತರಿಂದ ನೋಂದಣಿಗೆ ಆಹ್ವಾನ

ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಬೆಳ್ಳಿಚಡವು ಈಶ್ವರಮಂಗಲ ಇದರ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ (ಚೆಂಡೆ ಮತ್ತು ಮದ್ದಳೆ)ಹಾಗೂ ಮುಮ್ಮೇಳ(ನಾಟ್ಯ)ತರಗತಿಯು ಶ್ರೀ ಅಯ್ಯಪ್ಪ ಶಾರದಾಂಬ ಭಜನಾ ಮಂದಿರ ಬೆಳ್ಳಿಚಡವು ಇದರ ವಠಾರದಲ್ಲಿ ಎಂದಿನಂತೆ ಅತೀ ಶೀಘ್ರದಲ್ಲಿ ಪುನರಾರಂಭಗೊಳ್ಳಲಿದೆ.


ಚೆಂಡೆ ಮತ್ತು ಮದ್ದಲೆ ತರಗತಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ವಯಸ್ಸಿನ ಮಿತಿಯಿಲ್ಲದೆ ನಡೆಯುವ ಈ ತರಗತಿಗೆ ಕಲಿಯಬೇಕೆಂಬ ಹಂಬಲ ಇರುವ ಎಲ್ಲರಿಗೂ ಅವಕಾಶವಿದೆ…
ಸಂಪೂರ್ಣ ಉಚಿತವಾಗಿ ಕಲಿಸುವ ಭಾಗವತಿಕೆ ತರಗತಿ ಗೆ ಸೇರುವವರು ಕೂಡ ಸೇರಬಹುದು.

You may also like

Leave a Comment