72
ಕಾಸರಗೋಡು: ತಾಲೂಕಿನ ಕೂಡ್ಲು ಗ್ರಾಮದ ಶಿವನಗರದಲ್ಲಿ ನೆಲೆಸಿರುವ ಆರಾಧ್ಯದೇವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22ರ ಭಾನುವಾರ ಮಹತ್ವದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಲೋಕ ಕಲ್ಯಾಣದ ಉದ್ದೇಶದಿಂದ ಅಂದು ದೇವರಿಗೆ ಅದ್ದೂರಿಯಾಗಿ “ಶತರುದ್ರಾಭಿಷೇಕ” ಸೇವೆ ನೆರವೇರಲಿದೆ. ಹಿಂದೂ ಧರ್ಮದ ಸನಾತನ ತತ್ವಗಳ ಸಾರವನ್ನು ಒಳಗೊಂಡಿರುವ ಈ ಅನುಷ್ಠಾನವು ವೇದೋಕ್ತವಾಗಿ ಜರುಗಲಿದ್ದು, ಭಕ್ತಾದಿಗಳು ಪಾಲ್ಗೊಳ್ಳಲು ಸಮಿತಿ ವಿನಂತಿಸಿದೆ.
ಕೃಷ್ಣ ಯಜುರ್ವೇದದ ತೈತ್ತಿರೀಯ ಸಂಹಿತೆಯ ಪವಿತ್ರ ರುದ್ರಪ್ರಶ್ನೆಯ ಪಠಣದೊಂದಿಗೆ ಈ ಸೇವೆ ನಡೆಯಲಿದೆ. ದುಃಖ, ದಾರಿದ್ರ್ಯ ಹಾಗೂ ರೋಗರುಜಿನಗಳ ನಿವಾರಣೆಗಾಗಿ ಮತ್ತು ಸಕಲ ಸನ್ಮಂಗಲ ಪ್ರಾಪ್ತಿಗಾಗಿ ಈ ಪವಿತ್ರ ರುದ್ರಾನುಷ್ಠಾನವನ್ನು ಸಂಕಲ್ಪಿಸಲಾಗಿದೆ. ಅಧ್ಯಾತ್ಮಿಕವಾಗಿ ಅತ್ಯಂತ ಮಹತ್ವ ಪಡೆದಿರುವ ಈ ಅಪೂರ್ವ ಸತ್ಕರ್ಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಹಾದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.