Home Uncategorizedಎ. 24ರಂದು ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ

ಎ. 24ರಂದು ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ

by anamika

ಎ. 24ರಂದು ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ

ಮಂಗಳೂರು: ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ‘ದೇವ್ ದಾಸ್‌ನ ಲೀಲಾ’ ತುಳು ಚಲನಚಿತ್ರವು ಏಪ್ರಿಲ್ 24ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕನಟ , ಈ ಚಿತ್ರವು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು, ತುಳು ಚಿತ್ರರಂಗಕ್ಕೆ ಮೊದಲ ಬಾರಿಗೆ ಬಾಲಿವುಡ್ ಟಚ್ ನೀಡಲಾಗಿದೆ ಎಂದು ಹೇಳಿದರು. ‘ಜಯಂತಿ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ತನ್ನ ನಾಲ್ಕನೇ ಚಿತ್ರವಾಗಿದ್ದು, ಪ್ರಸ್ತುತ ಪೀಳಿಗೆಗೆ ಅಗತ್ಯವಾದ ಸಂದೇಶವನ್ನು ಹೊಂದಿದೆ ಎಂದರು.

ಚಿತ್ರದ ಡ್ಯಾನ್ಸ್ ಆಂಥೆಮ್ ಹಾಡಿನಲ್ಲಿ ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕರಾದ , , ಸೇರಿದಂತೆ ಹಲವು ಗಣ್ಯರು ಹೆಜ್ಜೆ ಹಾಕಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಮಾತನಾಡಿ, ಈ ಚಿತ್ರದಲ್ಲಿ ತುಳು ಚಿತ್ರರಂಗದ ಖ್ಯಾತ ಕಲಾವಿದರಾದ , , ಹಾಗೂ ಅಭಿನಯಿಸಿದ್ದಾರೆ ಎಂದು ಹೇಳಿದರು. ಮಂಗಳೂರು ಭಾಗದಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ 7 ಹಾಡುಗಳು ಮತ್ತು ಒಂದು ಫೈಟ್ ಸನ್ನಿವೇಶವಿದೆ.

ಹಾಸ್ಯಭರಿತ ಕಥೆಯ ಜೊತೆಗೆ ಉತ್ತಮ ಸಂದೇಶವನ್ನು ಒಳಗೊಂಡಿರುವ ‘ದೇವ್ ದಾಸ್‌ನ ಲೀಲಾ’ ಚಿತ್ರವು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.

You may also like

Leave a Comment