ಕನ್ನಡ ಚಿತ್ರರಂಗದ ಖ್ಯಾತ ನಟ–ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ದಾಂಪತ್ಯ ಜೀವನಕ್ಕೆ 9 ವರ್ಷ ತುಂಬಿದೆ. 2017ರ ಫೆಬ್ರವರಿ 9ರಂದು ವಿವಾಹವಾದ ಈ ದಂಪತಿ ಇಂದು ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ಈ ವಿಶೇಷ ದಿನದ ಅಂಗವಾಗಿ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ತೆಗೆದ ಫೋಟೋಗಳನ್ನು ಹಂಚಿಕೊಂಡು, ಹೃದಯಸ್ಪರ್ಶಿ ಸಂದೇಶದ ಮೂಲಕ ಪ್ರೀತಿಯಿಂದ ಶುಭಾಶಯಗಳನ್ನು ತಿಳಿಸಿದ್ದಾರೆ. “ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತೀ ಕ್ಷಣವೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ನಲಿವು–ನೋವು, ನಗು–ಸರಸವಿರಸಗಳ ನಡುವೆ ಸಮರಸವಿದೆ; ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಾಗದ ಒಲವಿದೆ,” ಎಂದು ಅವರು ಬರೆದಿದ್ದಾರೆ.

“ನನ್ನ ಸತಿಯಾಗಿ, ಸೌಭಾಗ್ಯದೇವತೆಯಾಗಿ, ಸಾಥಿಯಾಗಿ ಬಂದು ನನ್ನ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀನು ನನ್ನ ಕೈ ಹಿಡಿದು ಜೊತೆಗಿದ್ದಾಗ ಈ ಬದುಕು ಇನ್ನಷ್ಟು ಸುಂದರವೆನಿಸುತ್ತದೆ,” ಎಂದು ಪ್ರಗತಿಗೆ ಪ್ರೀತಿಯ ಮಾತುಗಳನ್ನು ಅರ್ಪಿಸಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ವಿವಾಹ ಮಹೋತ್ಸವ ಕುಂದಾಪುರ ಸಮೀಪದ ಕೋಟೇಶ್ವರದಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆದಿತ್ತು. ತಮ್ಮ ಹುಟ್ಟೂರಲ್ಲೇ ಮದುವೆಯ ಸಂಭ್ರಮ ಆಚರಿಸಿದ್ದ ಈ ಜೋಡಿ ಅಭಿಮಾನಿಗಳ ಮನಗೆದ್ದಿತ್ತು.
ಚಿತ್ರರಂಗದ ವಿಚಾರಕ್ಕೆ ಬಂದರೆ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್- 1 ಚಿತ್ರವು ಭಾರೀ ಯಶಸ್ಸು ಗಳಿಸಿದ್ದು, ಅವರ ವೃತ್ತಿಜೀವನದಲ್ಲೂ ಹೊಸ ಮೈಲಿಗಲ್ಲಾಗಿ ಪರಿಣಮಿಸಿದೆ.
Kantara Star Rishab Shetty–Pragathi Shetty Celebrate 9 Years of Marriage
Renowned Kannada actor and director Rishab Shetty and his wife Pragathi Shetty have completed nine years of married life. The couple, who tied the knot on February 9, 2017, marked their wedding anniversary today with joy and celebration.
On the special occasion, Rishab Shetty shared photos with Pragathi on social media and penned a heartfelt note. He wrote, “Nine years have passed since our bond of love was tied together. When I look back, every moment we have spent together feels like a collection of sweet memories. Amid happiness and hardship, laughter and disagreements, there is harmony, and above all, an unending love.”