Home ರಾಜಕೀಯಇರಾನ್‌ನಲ್ಲಿ ಕುರ್ಚಿ ಬದಲಾವಣೆ… ಇವನೇ ಹೊಸ ನಾಯಕ⁉️

ಇರಾನ್‌ನಲ್ಲಿ ಕುರ್ಚಿ ಬದಲಾವಣೆ… ಇವನೇ ಹೊಸ ನಾಯಕ⁉️

CHANGE OF POWER IN IRAN... IS HE THE NEW LEADER⁉️

by anamika

ತೆಹ್ರಾನ್: ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಅವರ ನಿಧನದ ಹಿನ್ನೆಲೆಯಲ್ಲಿ ದೇಶದ ರಾಜಕೀಯ ಹಾಗೂ ಧಾರ್ಮಿಕ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ರಾಷ್ಟ್ರದ ಅತ್ಯುನ್ನತ ಸ್ಥಾನವಾದ ಸರ್ವೋಚ್ಚ ನಾಯಕ ಹುದ್ದೆಗೆ ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ (Interim) ಸರ್ವೋಚ್ಚ ನಾಯಕನಾಗಿ ನೇಮಕ ಮಾಡಲಾಗಿದೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಮೇನಿ ಅವರ ನಿಧನವು ಇರಾನ್ ಸೇರಿದಂತೆ ಸಂಪೂರ್ಣ ಮಧ್ಯಪ್ರಾಚ್ಯ ಪ್ರದೇಶದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ದೇಶದಲ್ಲಿ ಆಡಳಿತಾತ್ಮಕ ಸ್ಥಿರತೆ ಕಾಪಾಡುವ ಉದ್ದೇಶದಿಂದ ಇರಾನ್‌ನ ಪ್ರಭಾವಿ ಧಾರ್ಮಿಕ ಮಂಡಳಿಯಾದ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.

ಅಯತೊಲ್ಲಾ ಅರಾಫಿ ಅವರು ಇರಾನ್‌ನ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ನೇತೃತ್ವ ವಹಿಸಿದ್ದ ಅವರು, ಖಮೇನಿ ಅವರ ಆಪ್ತ ವಲಯದ ನಾಯಕರಲ್ಲಿ ಒಬ್ಬರಾಗಿದ್ದರು. ಸಂಕಷ್ಟದ ಸಮಯದಲ್ಲಿ ಆಡಳಿತ ನಿರಂತರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಅವರಿಗೆ ತಾತ್ಕಾಲಿಕ ನಾಯಕತ್ವದ ಹೊಣೆಗಾರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅಮೆರಿಕದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆ ಈ ಬೆಳವಣಿಗೆ ಜಾಗತಿಕ ಗಮನ ಸೆಳೆದಿದೆ. ವಿಶೇಷವಾಗಿ ಇರಾನ್‌ನ ವಿದೇಶಾಂಗ ನೀತಿ, ಭದ್ರತಾ ಧೋರಣೆ ಮತ್ತು ಪರಮಾಣು ಕಾರ್ಯಕ್ರಮಗಳ ಮೇಲೆ ಹೊಸ ನಾಯಕತ್ವದ ಪರಿಣಾಮ ಹೇಗಿರಲಿದೆ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯ ನಿಕಟವಾಗಿ ಗಮನಿಸುತ್ತಿದೆ.

ಮುಂದಿನ ದಿನಗಳಲ್ಲಿ ಶಾಶ್ವತ ಸರ್ವೋಚ್ಚ ನಾಯಕ ಆಯ್ಕೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದ್ದು, ಇರಾನ್‌ನ ರಾಜಕೀಯ ದಿಕ್ಕು ಯಾವತ್ತಿಗೆ ಸಾಗುತ್ತದೆ ಎಂಬುದು ಜಾಗತಿಕ ರಾಜಕೀಯದಲ್ಲಿ ಪ್ರಮುಖ ವಿಷಯವಾಗಲಿದೆ.

You may also like

Leave a Comment