80
🔰 ಎಲ್‌ಪಿಜಿ ಕೊರತೆಗೆ ಸರ್ಕಾರದ ತುರ್ತು ಕ್ರಮ: ಬುಕ್ ಮಾಡಿದ ದಿನವೇ ಸಿಲಿಂಡರ್ ವಿತರಣೆ 🔰
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಭೀತಿಯಿಂದ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಡುಗೆ ಅನಿಲ ಕೊರತೆ ಕಂಡುಬಂದಿದೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಗ್ರಾಹಕರ ಅನುಕೂಲಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಗ್ರಾಹಕರು ಹಿಂದಿನ ವಿತರಣೆಯಿಂದ 26 ದಿನಗಳ ನಂತರ ಸಿಲಿಂಡರ್ ಬುಕ್ ಮಾಡಿದರೆ, ಅದೇ ದಿನ ವಿತರಣೆ ಮಾಡುವುದು ಕಡ್ಡಾಯ ಎಂದು ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಲಾಗಿದೆ. ಇದರಿಂದ ಏಜೆನ್ಸಿಗಳ ಮುಂದೆ ಉಂಟಾಗುವ ದೀರ್ಘ ಸಾಲುಗಳು ಮತ್ತು ವಿಳಂಬ ಸಮಸ್ಯೆ ನಿವಾರಣೆಯಾಗಲಿದೆ.
ಈ ಕ್ರಮವು ಪೂರೈಕೆಯಲ್ಲಿ ಉಂಟಾಗಿರುವ ತಾತ್ಕಾಲಿಕ ಅಡಚಣೆಗಳನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ, ಸಾಮಾನ್ಯ ಜನರಿಗೆ ತೊಂದರೆ ಆಗದಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..