🔰 ಎನ್‌ಎಂಸಿ ವಿದ್ಯಾರ್ಥಿಯಿಂದ 24 ಗಂಟೆಗಳ ಕೂಚುಪುಡಿ ನೃತ್ಯ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗುರಿ 🔰
ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಕೂಚುಪುಡಿ ನೃತ್ಯದ ಮೂಲಕ ವಿಶ್ವ ದಾಖಲೆ ಸಾಧನೆಗೆ ಹೆಜ್ಜೆ ಹಾಕಿದ್ದು, ಗಮನ ಸೆಳೆಯುತ್ತಿದ್ದಾರೆ.

ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಅಭಿಷೇಕ್ ಕಣೆಮರಡ್ಕ ಅವರು ನಿರಂತರ 24 ಗಂಟೆಗಳ ಕೂಚುಪುಡಿ ನೃತ್ಯ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರುವ ಗುರಿ ಹೊಂದಿದ್ದಾರೆ. ಈ ನೃತ್ಯ ಪ್ರದರ್ಶನವು ಈಗಾಗಲೇ 18 ಗಂಟೆಗಳ ಕಾಲ ಯಶಸ್ವಿಯಾಗಿ ಮುಂದುವರಿದಿದೆ.
ಎಪ್ರಿಲ್ 11ರಂದು ಸಂಜೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಆರಂಭವಾದ ಈ ನೃತ್ಯ, ಎಪ್ರಿಲ್ 12ರಂದು ಸಂಜೆ 7 ಗಂಟೆಯವರೆಗೆ ನಡೆಯಲಿದ್ದು, 24 ಗಂಟೆಗಳ ಸಾಧನೆ ಪೂರ್ಣಗೊಳ್ಳಲಿದೆ.

ಪ್ರದರ್ಶನದ ಅವಧಿಯಲ್ಲಿ ತರಂಗಂ, ಅಷ್ಟಪದಿ, ಶಬ್ದಂ ಸೇರಿದಂತೆ ಕೂಚುಪುಡಿ ನೃತ್ಯದ ವಿವಿಧ ಪ್ರಕಾರಗಳನ್ನು ಅಭಿಷೇಕ್ ಅವರು ಮನಮುಟ್ಟುವ ರೀತಿಯಲ್ಲಿ അവതരിപ്പಿಸುತ್ತಿದ್ದು, ಪ್ರೇಕ್ಷಕರ ಮನಸೆಳೆಯುತ್ತಿದ್ದಾರೆ.
ಮಂಡೆಕೋಲು ಗ್ರಾಮದ ರವಿ ಕೆ. ಹಾಗೂ ಸುಜಾತ ದಂಪತಿಗಳ ಪುತ್ರನಾದ ಅಭಿಷೇಕ್, ಕೂಚುಪುಡಿ ನೃತ್ಯದಲ್ಲಿ ತರಬೇತಿ ಪಡೆದಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪಠ್ಯಕ್ರಮಗಳನ್ನು ಪೂರ್ಣಗೊಳಿಸಿ, ಪ್ರಸ್ತುತ ವಿದ್ವತ್ ಅಧ್ಯಯನ ಮಾಡುತ್ತಿದ್ದಾರೆ.

ಈ ವಿಶಿಷ್ಟ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.