45
🔰 ನಾಲ್ಕೂರು: ಪೂಜಾರಿಕೋಡಿ ಕುಟುಂಬದ ಧರ್ಮದೈವ ನೇಮೋತ್ಸವ ಭಕ್ತಿಭಾವದಿಂದ ನೆರವೇರಿತು 🔰
ನಾಲ್ಕೂರು: ಗ್ರಾಮದಲ್ಲಿರುವ ಪೂಜಾರಿಕೋಡಿ ಕುಟುಂಬಸ್ಥರ ಧರ್ಮದೈವ ಹಾಗೂ ಸಹಪರಿವಾರ ದೈವಗಳ ನೇಮೋತ್ಸವವು ಏಪ್ರಿಲ್ 11 ಮತ್ತು 12ರಂದು ಭಕ್ತಿಭಾವದಿಂದ ನೆರವೇರಿತು.
ನೇಮೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದ್ದು, ಕುಟುಂಬದ ಯಜಮಾನರಾದ ವೆಂಕಪ್ಪ ಗೌಡ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಶಿಸ್ತಿನಿಂದ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು-ಬಳಗ ಹಾಗೂ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೈವದ ಗಂಧ ಪ್ರಸಾದವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು.
ಕಾರ್ಯಕ್ರಮವು ಸಂಪ್ರದಾಯಬದ್ಧ ಆಚರಣೆಗಳೊಂದಿಗೆ ನೆರವೇರಿದ್ದು, ಗ್ರಾಮದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತು.