107
ಅಮೆರಿಕ-ಯುರೋಪ್ ವ್ಯಾಪಾರ ಸಂಘರ್ಷ ಹಾಗೂ ಗ್ರೀನ್‌ಲ್ಯಾಂಡ್ ಪ್ರಚಲಿತ ವಿದ್ಯಮಾನಗಳ ನಡುವೆ, ಬುಧವಾರ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 91.28ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ. ಈ ಹಿಂದೆ 2025ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ 91ರ ಗಡಿ ದಾಟಿದ್ದ ರೂಪಾಯಿ, ಇಂದು 91.08ಕ್ಕೆ ವಹಿವಾಟು ಆರಂಭಿಸಿ ಮತ್ತಷ್ಟು ಇಳಿಕೆ ಕಂಡಿದೆ. ಜಾಗತಿಕ ಅಸ್ಥಿರತೆಯು ರೂಪಾಯಿ ಮೌಲ್ಯದ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ವರದಿಗಳು ತಿಳಿಸಿವೆ.