Home Uncategorizedಕೇರಳ ರಾಜ್ಯ ಕಲೋತ್ಸವ: ಯಕ್ಷಗಾನದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಸ್ಕೂಲಿಗೆ ಸತತ 3ನೇ ಬಾರಿ ಪ್ರಥಮ ಸ್ಥಾನ

ಕೇರಳ ರಾಜ್ಯ ಕಲೋತ್ಸವ: ಯಕ್ಷಗಾನದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಸ್ಕೂಲಿಗೆ ಸತತ 3ನೇ ಬಾರಿ ಪ್ರಥಮ ಸ್ಥಾನ

by Editor

ಕೇರಳ ರಾಜ್ಯ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಸ್ಕೂಲ್ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಈ ಸಾಧನೆಗೆ ಹಿಮ್ಮೇಳದ ಕಲಾವಿದರು ಮಹತ್ವದ ಸಹಕಾರ ನೀಡಿದ್ದಾರೆ. ಭಾಗವತರಾಗಿ ಶ್ರೀ ನಾರಾಯಣ ಶರ್ಮ (ಕಾಟುಕುಕ್ಕೆ), ಚೆಂಡೆಯಲ್ಲಿ ಶ್ರೀ ವರ್ಷಿತ್ (ಕೆಜ್ಜೆಕ್ಕಾರು), ಮದ್ದಳೆಯಲ್ಲಿ ಶ್ರೀ ಶಿವಶಂಕರ ಭಟ್ (ಅಂಬೆಮೂಲೆ), ಚಕ್ರತಾಳದಲ್ಲಿ ಶ್ರೀ ಬಾಲಕೃಷ್ಣ (ಏಳ್ಕಾನ) ಹಾಗೂ ವೇಷಭೂಷಣದ ನಿರ್ವಹಣೆಯಲ್ಲಿ ಶ್ರೀ ದುರ್ಗಾಂಬ ವೇಷಭೂಷಣ ಮಲ್ಲ ಅವರು ತಂಡವನ್ನು ಬೆಂಬಲಿಸಿದರು.

ಶಾಲೆಯ ಶಿಕ್ಷಕರಾದ ಶ್ರೀ ಹರಿಪ್ರಸಾದ್ ಮಾಯಿಲೆಂಗಿ, ಶ್ರೀ ಚಂದ್ರಹಾಸ ಅರೆಕ್ಕಾಡಿ ಮತ್ತು ಶ್ರೀ ಶಿವರಾಮ್ ಅರೆಕ್ಕಾಡಿ ಅವರು ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡಿ ಈ ಯಶಸ್ಸಿಗೆ ಕೈಜೋಡಿಸಿದರು.

You may also like

Leave a Comment