ಪ್ರತಿಭೆ ಎನ್ನುವುದು ಎಲ್ಲರಿಗೂ ಬರುವುದಿಲ್ಲ . ಒಬ್ಬೊಬ್ಬರು ಒಂದೊಂದು ರೀತಿಯ ಪ್ರತಿಭೆಯನ್ನು ಹೊಂದಿರುತ್ತಾರೆ ಇದಕ್ಕೆ ಪೂರಕ ಎಂಬಂತೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಗ್ಲಾಸ್ ಆರ್ಟ್ (ಸ್ಕ್ರೆಚ್ ಆರ್ಟ್) ಮೂಲಕ ತನ್ನ ಶಾಲೆಯ ಸಂಚಾಲಕರ ಭಾವಚಿತ್ರವನ್ನು ರಚನೆ ಮಾಡಿ ಎಲ್ಲರ ಪ್ರಶಂಸೆಗೆ ವಿದ್ಯಾರ್ಥಿಯೊಬ್ಬ ಪಾತ್ರನಾಗಿದ್ದಾನೆ.ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ,ಬೈತ್ತಡ್ಕ ನಿವಾಸಿ ರಾಧಾಕೃಷ್ಣರವರ ಪುತ್ರ ರವಿರಾಜ ತನ್ನ ಶಾಲೆಯ ಸಂಚಾಲಕರಾದ ಜಯಸೂರ್ಯ ರೈ ಯವರ ಭಾವಚಿತ್ರವನ್ನು ಒಂದು ಗಂಟೆಯಲ್ಲಿ ಗಾಜಿನ ಗ್ಲಾಸಲ್ಲಿ ಗ್ಲಾಸ್ ಆರ್ಟ್ ಮೂಲಕ ರಚನೆ ಮಾಡಿ ಪ್ರಗತಿ ಜಾತ್ರೆಯ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈಯವರಿಗೆ ಹಸ್ತಾಂತರ ಮಾಡಿರುತ್ತಾನೆ.ಈ ಸಂದರ್ಭದಲ್ಲಿ ಸಿ.ಅರ್.ಪಿ ದೇವಪ್ಪ, ಉದ್ಯಮಿ ಚಂದ್ರಶೇಖರ ಬರೆಪ್ಪಾಡಿ , ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಧನಂಜಯ ಕೇನಾಜೆ, ಶಾಲಾ ಆಡಳಿತ ಸಮಿತಿ ಸದಸ್ಯ ನಾಗೇಶ್ ರೈ ಮಾಳ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹಾಯಕ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಮಾಳ, ಕನ್ನಡ ಮಾಧ್ಯಮ ಮುಖ್ಯಸ್ಥೆ ವಿನಯ ವಿ ಶೆಟ್ಟಿ ,ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸುವರ್ಣ ಉಡುಪ, ತರಗತಿ ಶಿಕ್ಷಕಿ ಪುಷ್ಪ.ಬಿ.ಜೆ,ಅಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ.ರೈ, ಪೋಷಕ ಬಂದು ಚಿದಾನಂದ ಶೆಟ್ಟಿ ತಂಟೆಪ್ಪಾಡಿ ಉಪಸ್ಥಿತರಿದ್ದರು ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಸಂಚಾಲಕರ ಭಾವಚಿತ್ರವನ್ನು ಗ್ಲಾಸ್ ಆರ್ಟ್ ಮೂಲಕ ರಚನೆ ಮಾಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ
1.7K
previous post