Home ನಿಧನ ವಾರ್ತೆವೈರಲ್ ಸ್ಟಾರ್ ಆಶಾ ಪಂಡಿತ್ ಇನ್ನಿಲ್ಲ

ವೈರಲ್ ಸ್ಟಾರ್ ಆಶಾ ಪಂಡಿತ್ ಇನ್ನಿಲ್ಲ

by Editor

ಮಂಗಳೂರು, ಜ.23: ಇನ್‌ಸ್ಟಾಗ್ರಾಂನಲ್ಲಿ ವಿಶಿಷ್ಟ ಶೈಲಿಯಲ್ಲಿ ಫಾಲೋವರ್‌ಗಳನ್ನು ಹಾಸ್ಯಾಸ್ಪದವಾಗಿ ಬೈಯುವ ಮೂಲಕ ವೈರಲ್ ಆಗಿದ್ದ ನಾಗುರಿಯ ನಿವಾಸಿ ಆಶಾ ಪಂಡಿತ್ ಅವರು ಶುಕ್ರವಾರ (ಜ.23) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಅಸಾಮಾನ್ಯ ಹಾಗೂ ಕೆಲವೊಮ್ಮೆ ಹಾಸ್ಯಾಸ್ಪದ ಶೈಲಿಯ ರೀಲ್ಸ್‌ಗಳ ಮೂಲಕ ಆಶಾ ಪಂಡಿತ್ ಅವರು ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಗಳಿಸಿದ್ದರು. ಪಡೀಲ್ ಸಮೀಪದಲ್ಲಿ ಜೀವನೋಪಾಯಕ್ಕೆ ಅವರು ಸಣ್ಣ ಅಂಗಡಿಯನ್ನು ನಡೆಸುತ್ತಿದ್ದರು.

ಕುಟುಂಬ ಮೂಲಗಳ ಪ್ರಕಾರ, ಕಳೆದ ರಾತ್ರಿ ಅವರಿಗೆ ವಾಂತಿ ಕಾಣಿಸಿಕೊಂಡಿತ್ತು. ಬಳಿಕ ಶುಕ್ರವಾರ ಬೆಳಗಿನ ಜಾವ ಹೃದಯಾಘಾತ ಉಂಟಾಗಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment