Home ಬ್ರೇಕಿಂಗ್ ನ್ಯೂಸ್ಯುಜಿಸಿ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಬ್ರೇಕ್

ಯುಜಿಸಿ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಬ್ರೇಕ್

by Editor

ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿದ್ದ ವಿವಾದಾತ್ಮಕ ‘ಇಕ್ವಿಟಿ ನಿಯಮಗಳು 2026’ಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಜನವರಿ 29) ಮಧ್ಯಂತರ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಈ ಆದೇಶ ಹೊರಡಿಸಿದ್ದು, ಹೊಸ ನಿಯಮಗಳು ಪ್ರಾಥಮಿಕವಾಗಿ ‘ಅಸ್ಪಷ್ಟ’ ಮತ್ತು ‘ದುರುಪಯೋಗವಾಗಬಹುದು’ ಎಂದು ಅಭಿಪ್ರಾಯಪಟ್ಟಿದೆ. ಅಂತಿಮ ತೀರ್ಪು ಬರುವವರೆಗೆ 2012ರ ಹಳೆಯ ನಿಯಮಗಳೇ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ನಿಯಮಗಳು ಕೇವಲ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರಿಗೆ ಮಾತ್ರ ರಕ್ಷಣೆ ನೀಡಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ತಾರತಮ್ಯದ ವ್ಯಾಖ್ಯಾನದಿಂದ ಹೊರಗಿಟ್ಟಿರುವುದು ಅಸಂವಿಧಾನಿಕ ಎಂಬ ವಾದ ಕೇಳಿಬಂದಿತ್ತು. ಈ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕರ್ಣಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಫೆಬ್ರವರಿ 1 ರಂದು ‘ಭಾರತ್ ಬಂದ್’ಗೆ ಕರೆ ನೀಡಿವೆ. ಈ ಆಂತರಿಕ ಸಂಘರ್ಷ ಬಿಜೆಪಿಯಲ್ಲೂ ಸ್ಫೋಟಗೊಂಡಿದ್ದು, ಕೇಂದ್ರದ ಈ ನಡೆಯನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ವಿರೋಧಿಸಿರುವುದು “ಬಿಜೆಪಿ ವರ್ಸಸ್ ಬಿಜೆಪಿ” ಸಮರಕ್ಕೆ ನಾಂದಿ ಹಾಡಿದೆ

You may also like

Leave a Comment