294
ದೈಗೋಳಿ: ಶಿವತಾಂಡವ ಪುತ್ತಿಲ ಪರಿವಾರ, ಹಿಂದೂ ಬಾಂಧವರು ದೈಗೋಳಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕರ ತುರ್ತು ಚಿಕಿತ್ಸಾ ಸೌಕರ್ಯಕ್ಕಾಗಿ ಖರೀದಿಸಲಾದ ನೂತನ ಆಂಬೂಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವು ಇಂದು, ಫೆಬ್ರವರಿ 1ರ ಆದಿತ್ಯವಾರ ಸಂಜೆ ದೈಗೋಳಿಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ.
ಸಂಜೆ 4.30ಕ್ಕೆ ಕು| ಸಹನಾ ಶೆಟ್ಟಿ ನೇತೃತ್ವದ ಶ್ರೀ ಜ್ಯೋತಿರ್ಮಯಿ ನಾಟ್ಯಾಲಯ ಹಾಗೂ ಬಾಲಗೋಕುಲದ ಮಕ್ಕಳಿಂದ ‘ನೃತ್ಯ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಚಾಲನೆ ದೊರೆಯಲಿದೆ. ಸಂಜೆ 5.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ ಭಟ್ ಅವರು ಉದ್ಘಾಟಿಸಲಿದ್ದಾರೆ. ಗ್ರಾಮ ಪವಿತ್ರ ಪಾಣಿ ಶ್ರೀ ಕುಶಲಕುಮಾರ ಪಾತೂರಾಯ ಬೀಡು ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
