130
ನವದೆಹಲಿ: 2026ರ ಕೇಂದ್ರ ಬಜೆಟ್‌ನಲ್ಲಿ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದ್ದು, ಮದ್ಯದ ದರ ಏರಿಕೆಯಾಗಿದೆ. ಇದರೊಂದಿಗೆ ಬೀಡಿ ಬೆಲೆಯೂ ಏರಲಿದೆ. ಆದರೆ, ಜನಸಾಮಾನ್ಯರಿಗೆ ಹಲವು ಸಮಾಧಾನಕರ ಸುದ್ದಿಗಳಿವೆ. ಕ್ಯಾನ್ಸರ್ ಮತ್ತು ಶುಗರ್ ಔಷಧಿಗಳು, ಪಾದರಕ್ಷೆ, ಲೀಥಿಯಂ ಬ್ಯಾಟರಿ, ಚರ್ಮದ ಉತ್ಪನ್ನಗಳು ಹಾಗೂ ವಿಮಾನದ ಬಿಡಿಭಾಗಗಳ ಬೆಲೆ ಇಳಿಕೆಯಾಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶೇ. 2ರಷ್ಟು ಟಿಸಿಎಸ್ (TCS) ಕಡಿತಗೊಳಿಸಲಾಗಿದೆ. ಮೈಕ್ರೋವೇವ್ ಓವನ್ ಹಾಗೂ ಸಿಎನ್‌ಜಿ ಬಯೋ ಗ್ಯಾಸ್ ದರ ಕಡಿಮೆಯಾಗಲಿದ್ದು, ಸಮುದ್ರ ಮೀನುಗಾರಿಕೆಗೆ ಯಾವುದೇ ಶುಲ್ಕ ವಿಧಿಸದಿರಲು ಸರ್ಕಾರ ನಿರ್ಧರಿಸಿದೆ. ಸೆಣಬಿನ ಉತ್ಪನ್ನಗಳು ಇನ್ನು ಮುಂದೆ ಅಗ್ಗವಾಗಲಿವೆ.