Home ಬ್ರೇಕಿಂಗ್ ನ್ಯೂಸ್ಏಪ್ರಿಲ್ 1ರಿಂದ ದೇಶದಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ: ತೆರಿಗೆದಾರರಿಗೆ ಮಹತ್ವದ ಬದಲಾವಣೆ

ಏಪ್ರಿಲ್ 1ರಿಂದ ದೇಶದಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ: ತೆರಿಗೆದಾರರಿಗೆ ಮಹತ್ವದ ಬದಲಾವಣೆ

by Editor

ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾನೂನನ್ನು ಜಾರಿಗೆ ತರುತ್ತಿದೆ. ಈ ನೂತನ ಕಾಯ್ದೆಯು ತೆರಿಗೆದಾರರ ಮೇಲೆ ಹತ್ತಾರು ಪರಿಣಾಮಗಳನ್ನು ಬೀರಲಿದ್ದು, ಪ್ರಮುಖವಾಗಿ ವಾಹನ ಅಪಘಾತ ಪರಿಹಾರ ವಿಮೆಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ವೆಚ್ಚದ ಮೇಲೆ ಶೇ.2ರಷ್ಟು ಟಿಸಿಎಸ್ (TCS) ಕಡಿತಗೊಳಿಸಿರುವುದು ಜನಸಾಮಾನ್ಯರಿಗೆ ನಿರಾಳ ತಂದಿದೆ.

ಆದರೆ, ತೆರಿಗೆ ವಂಚಕರಿಗೆ ಕಾನೂನು ಬಿಗಿಗೊಳಿಸಲಾಗಿದ್ದು, ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಎನ್‌ಆರ್‌ಐಗಳ ಸ್ಥಿರಾಸ್ತಿ ಮಾರಾಟದ ಮೇಲೆ ಟಿಡಿಎಸ್ ಕಡಿತ ಅನ್ವಯವಾಗಲಿದ್ದು, ಸಣ್ಣ ತೆರಿಗೆದಾರರಿಗೆ ಕೇವಲ ದಂಡ ವಿಧಿಸಲು ನಿರ್ಧರಿಸಲಾಗಿದೆ. ತೆರಿಗೆ ವಂಚನೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯಗಳೇ ತೀರ್ಮಾನಿಸಲಿವೆ.

You may also like

Leave a Comment