64
ಎನ್.ಎಂ.ಸಿ ಮೈದಾನದಲ್ಲಿ ರತ್ನವರ್ಮ ಹೆಗ್ಗಡೆ ಸ್ಮಾರಕ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಲಾದ ರತ್ನವರ್ಮ ಹೆಗ್ಗಡೆ ಸ್ಮಾರಕ ರೋಲಿಂಗ್ ಟ್ರೋಫಿ ಅಂತರ್ ಕಾಲೇಜು ಪುರುಷರ ಅಹೋರಾತ್ರಿ ಮೂರು ದಿನಗಳ ಕಬಡ್ಡಿ ಟೂರ್ನ್ಮೆಂಟ್–2026 ಮಾ. 25ರಂದು ಎನ್.ಎಂ.ಸಿ. ಮೈದಾನದಲ್ಲಿ ಭಾನುವಾರ ಭರ್ಜರಿಯಾಗಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಕಾರ್ಯದರ್ಶಿ ಕೆ.ವಿ. ಹೇಮಾನಾಥ್ ವಹಿಸಿ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಮಹತ್ವವಾದುದಾಗಿ ತಿಳಿಸಿ, ಭಾಗವಹಿಸುವ ಎಲ್ಲ ತಂಡಗಳಿಗೆ ಶುಭ ಹಾರೈಸಿದರು.
ಈ ಟೂರ್ನಿಯಲ್ಲಿ ವಿವಿಧ ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಈ ಅಹೋರಾತ್ರಿ ಪಂದ್ಯಾಟದಲ್ಲಿ ಕಬಡ್ಡಿ ಪ್ರಿಯರಿಗೆ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.