Home ಕ್ರೈಂಹತ್ತು ವರ್ಷಗಳ ಹಳೆಯ ಸೇಡು: ಸವದತ್ತಿಯಲ್ಲಿ ತಾಯಿಯ ಸಂಬಂಧದ ದ್ವೇಷಕ್ಕೆ ವ್ಯಕ್ತಿಯ ಭೀಕರ ಹತ್ಯೆ

ಹತ್ತು ವರ್ಷಗಳ ಹಳೆಯ ಸೇಡು: ಸವದತ್ತಿಯಲ್ಲಿ ತಾಯಿಯ ಸಂಬಂಧದ ದ್ವೇಷಕ್ಕೆ ವ್ಯಕ್ತಿಯ ಭೀಕರ ಹತ್ಯೆ

by Editor

ಸವದತ್ತಿ :ಹೆತ್ತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಧಕ್ಕೆ ಬಂದಾಗ ಮನುಷ್ಯ ಎಂತಹ ಘೋರ ಕೃತ್ಯಕ್ಕೂ ಇಳಿಯಬಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ದ್ವೇಷದ ಕಿಡಿ 10 ವರ್ಷಗಳ ಬಳಿಕ ಜ್ವಾಲೆಯಾಗಿ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಭಯಾನಕ ಕೃತ್ಯ ನಡೆದಿದೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದ ದುರ್ದೈವಿ. ಈರಯ್ಯ ಮಠಪತಿ ಎಂಬಾತನೇ ಈ ಘೋರ ಕೃತ್ಯ ಎಸಗಿದ ಆರೋಪಿ. ಸಾರ್ವಜನಿಕವಾಗಿ, ರಸ್ತೆ ಮಧ್ಯೆಯೇ ನಡೆದ ಈ ರಕ್ತಸಿಕ್ತ ಅಧ್ಯಾಯವನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

You may also like

Leave a Comment