Home ಧಾರ್ಮಿಕಮಂಗಳೂರು: ಫೆ.7ರಂದು ಅತ್ತಾವರದಲ್ಲಿ ಬೃಹತ್ ‘ಹಿಂದೂ ಸಂಗಮ’ ಆಯೋಜನೆ

ಮಂಗಳೂರು: ಫೆ.7ರಂದು ಅತ್ತಾವರದಲ್ಲಿ ಬೃಹತ್ ‘ಹಿಂದೂ ಸಂಗಮ’ ಆಯೋಜನೆ

by Editor

ಮಂಗಳೂರು: ‘ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎಂಬ ಘೋಷವಾಕ್ಯದೊಂದಿಗೆ, ಹಿಂದೂ ಸಂಗಮ ಆಯೋಜನ ಸಮಿತಿ ಕದ್ರಿ ಮತ್ತು ಅರ್ಜುನ ವಸತಿ ಅತ್ತಾವರ ವತಿಯಿಂದ ಫೆಬ್ರವರಿ 7ರಂದು ಅತ್ತಾವರದ ಶ್ರೀ ಚಕ್ರಪಾಣಿ ಗೋಪಿನಾಥ ಕ್ಷೇತ್ರದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಸಂಜೆ 5 ಗಂಟೆಗೆ ಅತ್ತಾವರಕಟ್ಟೆಯಿಂದ ಕ್ಷೇತ್ರದವರೆಗೆ ವೈಭವದ ಶೋಭಾ ಯಾತ್ರೆ ನಡೆಯಲಿದೆ. ನಂತರ 5:30ಕ್ಕೆ ಶ್ರೀ ಚಕ್ರಪಾಣಿ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಹಿಂದೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಬೃಹತ್ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ಭಾಗವಹಿಸಬೇಕೆಂದು ಸಮಿತಿಯು ಪ್ರಕಟಣೆಯಲ್ಲಿ ವಿನಂತಿಸಿದೆ.

You may also like

Leave a Comment