77
ಬಿಲಾಸಪುರ: ಮೊಬೈಲ್ ಕರೆ ಮತ್ತು ಸಂದೇಶಗಳನ್ನು ಬ್ಲಾಕ್ ಮಾಡಿದ ಕಾರಣಕ್ಕೆ ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಛತ್ತೀಸ್‌ಗಢದ ಬಿಲಾಸಪುರದಲ್ಲಿ ನಡೆದಿದೆ. ಕಮ್ರ ಪ್ರಸಾದ್ (25) ಮೃತಪಟ್ಟ ದುರ್ದೈವಿ.
ಕಮ್ರ ಪ್ರಸಾದ್ ಮತ್ತು ರೋಶಿ (22) ನಡುವೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೇಮ ಸಂಬಂಧವಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಕಮ್ರ ಆಕೆಯ ನಂಬರ್ ಬ್ಲಾಕ್ ಮಾಡಿ ಮಾತನಾಡುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೋಶಿ, ಆತ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಮಂಗಳವಾರ ಸಂಜೆ ಚಾಕುವಿನೊಂದಿಗೆ ಆತನ ಮನೆಗೆ ತೆರಳಿದ್ದಾಳೆ. ಮೊಬೈಲ್ ನೀಡಲು ನಿರಾಕರಿಸಿದಾಗ ನಡೆದ ವಾಗ್ವಾದದಲ್ಲಿ ಆಕೆ ಪ್ರಿಯಕರನ ಎದೆಗೆ ಚಾಕು ಚುಚ್ಚಿದ್ದಾಳೆ. ತೀವ್ರ ರಕ್ತಸ್ರಾವದಿಂದ ಕಮ್ರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟಿದ್ದಾನೆ. ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.