72
ಮದುವೆಯ ಅದ್ದೂರಿ ವೆಚ್ಚಕ್ಕೆ ಕಡಿವಾಣ ಹಾಕಿ, ತಮ್ಮ ಭವಿಷ್ಯದ ಭದ್ರತೆಗಾಗಿ ಹೊಸ ಮನೆ ಖರೀದಿಸಿದ ದಂಪತಿಯ ನಿರ್ಧಾರ ಈಗ ವೈರಲ್ ಆಗಿದೆ. ದುಬಾರಿ ಮದುವೆಯ ಬದಲಿಗೆ ಉಳಿತಾಯ ಮಾಡಿದ ಹಣದಿಂದ ದಂಪತಿ ನೂತನ ಗೃಹ ಪ್ರವೇಶದೊಂದಿಗೆ ಸರಳವಾಗಿ ಮದುವೆ ವಿಧಿವಿಧಾನ ನೆರವೇರಿಸಿದ್ದಾರೆ. ಈ ಸ್ಮಾರ್ಟ್ ನಿರ್ಧಾರವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಗಳಿಸಿದ್ದು, ಯುವ ಪೀಳಿಗೆಗೆ ಹೊಸ ಪ್ರೇರಣೆಯಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.