Home ತಂತ್ರಜ್ಞಾನವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ ‘ಭಾರತ್ ಟ್ಯಾಕ್ಸಿ’ಗೆ ಇಂದು ಅಮಿತ್ ಶಾ ಚಾಲನೆ

ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ ‘ಭಾರತ್ ಟ್ಯಾಕ್ಸಿ’ಗೆ ಇಂದು ಅಮಿತ್ ಶಾ ಚಾಲನೆ

by Editor

ನವದೆಹಲಿ: ಎರಡು ತಿಂಗಳ ಯಶಸ್ವಿ ಪ್ರಾಯೋಗಿಕ ಕಾರ್ಯಾಚರಣೆಯ ನಂತರ, ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಪ್ರಸ್ತುತ ದೆಹಲಿ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಈ ನೂತನ ಸೇವೆಯು ಮುಂದಿನ ಎರಡು ವರ್ಷಗಳಲ್ಲಿ ದೇಶವ್ಯಾಪಿ ವಿಸ್ತರಣೆಯಾಗುವ ಗುರಿ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಓಲಾ, ಉಬರ್ ಮತ್ತು ರ್ಯಾಪಿಡೋ ಅಂತಹ ದೈತ್ಯ ಕಂಪನಿಗಳಿಗೆ ನೇರ ಸ್ಪರ್ಧೆ ನೀಡಲಿದೆ.

ಬೈಕ್ ದೀದಿ ಯೋಜನೆ:

ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ‘ಬೈಕ್ ದೀದಿ’ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ 150ಕ್ಕೂ ಹೆಚ್ಚು ಮಹಿಳಾ ಚಾಲಕಿಯರು ಈ ಯೋಜನೆಯನ್ನು ಸೇರಿಕೊಂಡಿದ್ದು, ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಉದ್ಯೋಗಾವಕಾಶಕ್ಕೆ ಹೊಸ ವೇದಿಕೆ ಕಲ್ಪಿಸಲಾಗಿದೆ. ಈ ಸಹಕಾರಿ ಮಾದರಿಯು ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ.

You may also like

Leave a Comment