Home ಕ್ರೈಂಉಲ್ಟಾ ಹೊಡೆದ ಕಳ್ಳ: ಕಳ್ಳತನಕ್ಕೆ ಹೋದಾಗ ಸಾರ್ವಜನಿಕರಿಂದ ಏಟು ತಿಂದ ಕಳ್ಳನಿಂದಲೇ ದೂರು ದಾಖಲು!

ಉಲ್ಟಾ ಹೊಡೆದ ಕಳ್ಳ: ಕಳ್ಳತನಕ್ಕೆ ಹೋದಾಗ ಸಾರ್ವಜನಿಕರಿಂದ ಏಟು ತಿಂದ ಕಳ್ಳನಿಂದಲೇ ದೂರು ದಾಖಲು!

by Editor

ಬೆಂಗಳೂರು :ಕಳ್ಳತನಕ್ಕೆ ಹೋಗಿದ್ದಾಗ ಅಪಾರ್ಟ್‌ಮೆಂಟಿನವರು ಹೊಡೆದ್ರೂ ಅಂತಾ ಕಳ್ಳನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಬೆಂಗಳೂರಿನ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಅಜ್ಗರ್ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣ ಕದಿಯಲು ಪ್ಲಾನ್ ಮಾಡಿದ್ದ. ಯೋಜನೆಯಂತೆ ಮೂವರೂ ಸೇರಿ ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿದ್ದರು. ಆದರೆ, ಈ ವೇಳೆ ಅಲ್ಲಿನ ದಂಪತಿಗಳು ಇವರನ್ನು ನೋಡಿ ಪ್ರಶ್ನಿಸಿದಾಗ ಗಾಬರಿಯಾದ ಅಜ್ಗರ್, ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

You may also like

Leave a Comment