Home ಬ್ರೇಕಿಂಗ್ ನ್ಯೂಸ್ಗ್ರಾಹಕರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!

ಗ್ರಾಹಕರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!

by Editor

ಕಳೆದ ಮಂಗಳವಾರ ಮತ್ತು ಬುಧವಾರ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಗುರುವಾರ ದಿಢೀರ್ ಕುಸಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ, ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಗುರುವಾರದ ಅಂತ್ಯದ ವೇಳೆಗೆ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 502 ರೂಪಾಯಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ 15,442 ರೂಪಾಯಿಗೆ ತಲುಪಿದೆ. ಈ ದಿಢೀರ್ ಬದಲಾವಣೆಯು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಇನ್ನು ಆಭರಣ ಚಿನ್ನ ಅಥವಾ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗಣನೀಯ ಇಳಿಕೆ ದಾಖಲಾಗಿದೆ. ಪ್ರತಿ ಗ್ರಾಂಗೆ 460 ರೂಪಾಯಿ ಇಳಿಕೆಯಾಗುವ ಮೂಲಕ ಚಿನ್ನದ ದರ 14,155 ರೂಪಾಯಿಗೆ ಕುಸಿದಿದೆ. ಅಂದರೆ, ಕೇವಲ ಒಂದೇ ದಿನದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 4,600 ರೂಪಾಯಿ ಹಾಗೂ 100 ಗ್ರಾಂಗೆ ಬರೋಬ್ಬರಿ 46,000 ರೂಪಾಯಿ ಕಮ್ಮಿಯಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಈ ಇಳಿಕೆಯು ಹೂಡಿಕೆ ಹಾಗೂ ಖರೀದಿ ಮಾಡಲು ಉತ್ತಮ ಅವಕಾಶ ಒದಗಿಸಿದೆ.

You may also like

Leave a Comment