387
ಕಾಣಿಯೂರು: ಸ್ಥಳೀಯ ವಾರದ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಬಾಬು ಪೂಜಾರಿ ಕೆಲೆಂಬಿರಿ ಅವರು ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
, ಕಾಣಿಯೂರಿನ ವಾರದ ಸಂತೆ ವ್ಯಾಪಾರಸ್ಥರು ಮಾನವೀಯತೆ ತೋರಿಸಿ, ಒಟ್ಟು ₹11,500 ಮೊತ್ತವನ್ನು ಸಂಗ್ರಹಿಸಿ ಅವರ ಮನೆಗೆ ಭೇಟಿ ನೀಡಿ ಸಹಾಯಧನವನ್ನು ಹಸ್ತಾಂತರಿಸಿದರು.
ಕೇವಲ ಸಂತೆ ವ್ಯಾಪಾರದ ಮೂಲಕ ಜೀವನದ ಬಂಡಿ ಸಾಗಿಸುತ್ತಿರುವ ಇವರುಗಳ ಸಮಾಜದೊಳಗಿನ ಸಹಕಾರ ಮತ್ತು ಸಹಾನುಭೂತಿಯ ಉತ್ತಮ ಉದಾಹರಣೆಯಾಗಿರುವ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಸಮಾಜಮುಖಿ ಚಟುವಟಿಕೆಗಳ ಮೂಲಕ ಇತರರಿಗೆ ಮಾದರಿಯಾಗಿರುವ ವ್ಯಾಪಾರಸ್ಥರ ಈ ನಡೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.