Home ಧಾರ್ಮಿಕಮಡಿಕೇರಿಯಲ್ಲಿ ಫೆಬ್ರವರಿ 7 ರಂದು ವಿರಾಟ ‘ಹಿಂದೂ ಸಂಗಮ’ ಆಯೋಜನೆ

ಮಡಿಕೇರಿಯಲ್ಲಿ ಫೆಬ್ರವರಿ 7 ರಂದು ವಿರಾಟ ‘ಹಿಂದೂ ಸಂಗಮ’ ಆಯೋಜನೆ

by Editor

ಮಡಿಕೇರಿ: ಕೊಡಗಿನ ಸಾಂಸ್ಕೃತಿಕ ಕೇಂದ್ರವಾದ ಮಡಿಕೇರಿ ನಗರದಲ್ಲಿ ಸನಾತನ ಧರ್ಮದ ರಕ್ಷಣೆ ಮತ್ತು ಸಂಘಟನೆಯ ಉದ್ದೇಶದೊಂದಿಗೆ ಬೃಹತ್ ‘ಹಿಂದೂ ಸಂಗಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಡಿಕೇರಿ ನಗರದ ಅಭಿಮನ್ಯು ವಸತಿಯ ವ್ಯಾಪ್ತಿಗೆ ಬರುವ ಗೌಳಿಬೀದಿ, ವಿದ್ಯಾನಗರ, ಚಾಮುಂಡೇಶ್ವರಿ ನಗರ ಸೇರಿದಂತೆ ವಿವಿಧ ಬಡಾವಣೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಾತೃಭೂಮಿಯ ರಕ್ಷಣೆ ಹಾಗೂ ಹಿಂದೂ ಸಂಸ್ಕೃತಿಯ ಸಂವರ್ಧನೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಮಾಜದಲ್ಲಿ ಸಾಮರಸ್ಯ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಲು ಈ ವೇದಿಕೆ ಸಜ್ಜಾಗಿದೆ ಎಂದು ಆಯೋಜನಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿರಾಟ ಹಿಂದೂ ಸಂಗಮವು ಫೆಬ್ರವರಿ 7, 2026 ರ ಶನಿವಾರದಂದು ಮಧ್ಯಾಹ್ನ 2:00 ಗಂಟೆಗೆ ನಗರದ ಕಾನ್ವೆಂಟ್ ಆಟದ ಮೈದಾನದಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಬಂಧು-ಭಗಿನಿಯರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಂಘಟಿತ ಶಕ್ತಿಯ ಪ್ರದರ್ಶನದ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲಾಗುವುದು. ಮಡಿಕೇರಿಯ ಎಲ್ಲಾ ಧರ್ಮಪ್ರೇಮಿಗಳು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯ ಮೂಲಕ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.

You may also like

Leave a Comment