40
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನಿಯಮದಂತೆ, 25,000 ರೂ.ವರೆಗಿನ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ.
ಆದರೆ, 25,001 ರಿಂದ 1 ಲಕ್ಷ ರೂ.ವರೆಗೆ 2 ರೂ., 1 ರಿಂದ 2 ಲಕ್ಷ ರೂ.ವರೆಗೆ 6 ರೂ. ಹಾಗೂ 2 ರಿಂದ 5 ಲಕ್ಷ ರೂ.ವರೆಗೆ 10 ರೂ. ಜೊತೆಗೆ ಜಿಎಸ್ಟಿ ವಿಧಿಸಲಾಗುತ್ತದೆ. ಈ ಹೊಸ ದರಗಳು ಫೆಬ್ರವರಿ 15ರಿಂದ ಜಾರಿಗೆ ಬರಲಿವೆ. ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹಣ ವರ್ಗಾಯಿಸಿದರೆ ಹಳೆಯ ಶುಲ್ಕವೇ ಮುಂದುವರಿಯಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.