177
ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡ ಕೊಡಿಯಾಲ ಗೊನೆ ಮುಹೂರ್ತ

ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡ ಕೊಡಿಯಾಲ ಇಲ್ಲಿ ದಿನಾಂಕ 09-03-2026ನೇ ಸೋಮವಾರ ಮತ್ತು 10-03-2026ನೇ ಮಂಗಳವಾರ ಪರಮಾಲ್ಯದಲ್ಲಿ ನಡೆಯಲಿರುವ ಶ್ರೀ ಉಳ್ಳಾಕುಲು ಮತ್ತುಪರಿವಾರ ದೈವಗಳ ನೇಮೋತ್ಸದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮೋಕೇಸರರಾದ ಶಿವರಾಮ ಉಪಾಧ್ಯಾಯ ಕಲ್ಪಡ, ಆಡಳಿತ ಸಮಿತಿ ಅಧ್ಯಕ್ಷರಾದ ಸುಬ್ರಮಣ್ಯ ಕೆ. ಎಂ., ಕಾರ್ಯದರ್ಶಿ ಬಾಲಕೃಷ್ಣ ಗೌಡ ಪೋಳಾಜೆ, ದೈವದ ಪಾತ್ರಿಯವರಾದ ಧನಂಜಯ ಇಪ್ಪುಳ್ತಡಿ, ಬೆಳ್ಳಿಯಪ್ಪ ಗೌಡ ಕಲ್ಪಡ, ಶ್ರೀಧರ ಕಲ್ಪಡ ಮತ್ತು ಆಡಳಿತ ಸಮಿತಿ ಸದಸ್ಯರಾದ ಭಾಸ್ಕರ ಗೌಡ ಗುತ್ತು, ಹರ್ಷನ್ ಕೆ.ಟಿ, ಕೇಶವ ಕಲ್ಪಡ ತೋಟ, ಸುಂದರ ಗೌಡ ಪೋಳಜೆ, ಚೇತನ್ ಗುತ್ತು, ನಾರಾಯಣ ಕಲ್ಪಡ, ಆನಂದ ಗೌಡ ಕಲ್ಪಡ ಉಪಸ್ಥಿತರಿದ್ದರು.

