Home ಕೃಷಿಮಾನ್ಯಡ್ಕ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆ

ಮಾನ್ಯಡ್ಕ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆ

by Editor

ಮಾನ್ಯಡ್ಕ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆ

ನೂತನ ಅಧ್ಯಕ್ಷೆ: ಸಂಧ್ಯಾ ನಳಿಯಾರು, ಉಪಾಧ್ಯಕ್ಷೆ: ಜಲಜಾಕ್ಷಿ ಇದುಂಗುಳಿ

ಮುರುಳ್ಯ : ಮಾನ್ಯಡ್ಕ ಹಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಆವಿರೋಧವಾಗಿ ಎಲ್ಲಾ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.

ಒಟ್ಟು 13 ಸ್ಥಾನಗಳನ್ನು ಹೊಂದಿರುವ ಮಹಿಳಾ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಅಧ್ಯಕ್ಷರು ಸಂಧ್ಯಾ ನಳಿಯಾರು,

ಉಪಾಧ್ಯಕ್ಷರು ಜಾಲಜಾಕ್ಷಿ ಇದುಂಗುಳಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸಾಮಾನ್ಯ ಸ್ಥಾನ ದಿಂದ ನಿರ್ದೇಶಕರಾಗಿ ಸುಧಾರಾಣಿ ಕಡೀರ, ಮೀನಾಕ್ಷಿ , ಬೇಬಿ , ಬಬಿತ , ಚಂದ್ರಾವತಿ , ಮೋಹಿನಿ, ಕುಸುಮಾವತಿ ನಳಿಯಾರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ .

ಹಿಂದುಳಿದ ವರ್ಗ ‘ಎ’ ಮತ್ತು ‘ಬಿ’ ಹಾಗೂ ಪರಿಶಿಷ್ಟ ಪಂಗಡಮೀಸಲು ಸ್ಥಾನದಿಂದ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ.

ಸಂಘದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಳು ಫೆ.24ರಿಂದ ಪ್ರಾರಂಭಗೊಂಡಿತ್ತು. ಫೆ.28 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿತ್ತು. ಮಾ.1ರಂದು | ನಾಮಪತ್ರಗಳ ಪರಿಶೀಲನೆ ನಡೆದು ಮಾ.2 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿತ್ತು. ಮಾ. 4 ರಂದು ಚುನಾವಣೆ ನಡೆಸಲಾಯಿತು. ಸುಳ್ಯ ತಾಲೂಕು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ.ಎಂ

ಚುನಾವಣಾಧಿಕಾರಿಯಾಗಿದ್ದರು.ಸಂಘದ ಕಾರ್ಯದರ್ಶಿ ಸುಮಿತ್ರ ನಳಿಯಾರು ಸಹಕರಿಸಿದರು.

You may also like

Leave a Comment