35
ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘ
*ವಿಶ್ವ ಪರಿಸರ ದಿನಾಚರಣೆ* ಗಿಡ ವಿತರಣೆ
ಕಾಣಿಯೂರು:ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸಂಘದ ಬೊಬ್ಬೆಕೇರಿ ಶಾಖೆಯ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಲು ಪೂರೈಸುತ್ತಿರುವ ಎಲ್ಲಾ ಸದಸ್ಯರ ಮನೆಗೊಂದು ಗಿಡದಂತೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ,ನಿರ್ದೇಶಕರಾದ ಚೆನ್ನಕೇಶವ ಬೇಂಗಡ್ಕ, ಸೌಮ್ಯಾ ಹರೀಶ್ ಪೈಕ, ರಾಜೇಶ್ ಮೀಜೆ, ಕಾರ್ಯದರ್ಶಿ ಜಗದೀಶ್ ಗೌಡ, ಸಿಬ್ಬಂದಿ ಚಂದ್ರಾವತಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.