30
ನವದೆಹಲಿ: ದೇಶೀಯ ಎಲ್‌ಪಿಜಿ (LPG) ಸಿಲಿಂಡರ್ ರಿಫಿಲ್ಲಿಂಗ್ ಕಾಯ್ದಿರಿಸುವ ಅವಧಿಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಈವರೆಗೆ 21 ದಿನಗಳ ಬಳಿಕ ಸಿಲಿಂಡರ್ ರಿಫಿಲ್ ಮಾಡಲು ಅವಕಾಶ ಇದ್ದರೆ, ಇನ್ನು ಮುಂದೆ 25 ದಿನಗಳ ಬಳಿಕ ಮಾತ್ರ ಹೊಸ ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಂದು ಸಿಲಿಂಡರ್ ಪಡೆದ ಬಳಿಕ ಕನಿಷ್ಠ 25 ದಿನಗಳ ಬಳಿಕವೇ ಮತ್ತೊಂದು ಸಿಲಿಂಡರ್ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜನ್ನು ಸಮತೋಲನದಲ್ಲಿಡಲು ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿಯಮದಿಂದಾಗಿ ಗ್ರಾಹಕರು ತಮ್ಮ ಸಿಲಿಂಡರ್ ಬಳಕೆಯನ್ನು ಹೆಚ್ಚು ಜಾಗರೂಕತೆಯಿಂದ ನಿರ್ವಹಿಸಬೇಕಾಗಿದ್ದು, ಬೇಗ ಸಿಲಿಂಡರ್ ಮುಗಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿದುಬಂದಿದೆ.