Home ಬ್ರೇಕಿಂಗ್ ನ್ಯೂಸ್ಇನ್ಮೇಲೆ ಸಿಗಲ್ವಾ PARLE -G?

ಇನ್ಮೇಲೆ ಸಿಗಲ್ವಾ PARLE -G?

PARLE G

by Editor

ರಾಜ್ಯದಲ್ಲಿ ಸಾಮಾನ್ಯ ಜನರ ದಿನನಿತ್ಯ ಜೀವನಕ್ಕೆ ನೇರ ಪರಿಣಾಮ ಬೀರುವಂತಹ ಪರಿಸ್ಥಿತಿ ರೂಪುಗೊಳ್ಳುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮವಾಗಿ LPG ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಪರಿಣಾಮವಾಗಿ ಬಿಸ್ಕೆಟ್ ಉತ್ಪಾದನೆ ತೀವ್ರವಾಗಿ ಹಿನ್ನಡೆಯಾಗಿದೆ.

ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಹಾಗೂ ಹೊಸಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ Parle-G ಬಿಸ್ಕೆಟ್ ಫ್ಯಾಕ್ಟರಿಗಳು ಕಳೆದ 6 ದಿನಗಳಿಂದ ಸಂಪೂರ್ಣವಾಗಿ ಉತ್ಪಾದನೆಯನ್ನು ನಿಲ್ಲಿಸಿವೆ. ಕಳೆದ 10 ದಿನಗಳಿಂದ LPG ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಬಿಸ್ಕೆಟ್ ತಯಾರಿಕೆಗೆ ನಿರಂತರ LPG ಅಗತ್ಯವಿರುವುದರಿಂದ, ಗ್ಯಾಸ್ ಇಲ್ಲದೆ ಉತ್ಪಾದನೆ ಸಾಧ್ಯವಾಗುತ್ತಿಲ್ಲ.

ಹುಬ್ಬಳ್ಳಿ ಘಟಕಕ್ಕೆ ಪ್ರತಿದಿನ ಸುಮಾರು 1.5 ಟನ್ LPG ಅಗತ್ಯವಿದ್ದು, ಸಾಮಾನ್ಯವಾಗಿ ದಿನಕ್ಕೆ 40 ಟನ್‌ಗಳಷ್ಟು ಬಿಸ್ಕೆಟ್ ಉತ್ಪಾದನೆ ಆಗುತ್ತಿತ್ತು. ಇದೀಗ ಗ್ಯಾಸ್ ಕೊರತೆಯಿಂದ ಯಂತ್ರಗಳು ಸ್ಥಗಿತಗೊಂಡಿದ್ದು, 100ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗವಿಲ್ಲದಂತಾಗಿದ್ದಾರೆ.

ಪ್ರಸ್ತುತ ಫ್ಯಾಕ್ಟರಿಗಳಲ್ಲಿ ಉಳಿದಿರುವ ದಾಸ್ತಾನಿನ ಬಿಸ್ಕೆಟ್‌ಗಳನ್ನು ಮಾತ್ರ ಮಾರುಕಟ್ಟೆಗೆ ರವಾನಿಸಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಈ ಸ್ಟಾಕ್ ಖಾಲಿಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಬಿಸ್ಕೆಟ್ ಅಭಾವ ಉಂಟಾಗುವ ಭೀತಿ ವ್ಯಕ್ತವಾಗಿದೆ.

ಕಡಿಮೆ ಬೆಲೆಯ ಕಾರಣದಿಂದ Parle-G ಬಿಸ್ಕೆಟ್‌ಗಳು ಬಡವರ್ಗ ಹಾಗೂ ಮಕ್ಕಳಿಗೆ ಪ್ರಮುಖ ಆಹಾರವಾಗಿದೆ. ಉತ್ಪಾದನೆ ಸ್ಥಗಿತ ಮುಂದುವರಿದರೆ, ಇವರ ಮೇಲೆ ಹೆಚ್ಚು ಪರಿಣಾಮ ಬೀಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜಾಗತಿಕ ಉದ್ವಿಗ್ನತೆ ಸ್ಥಳೀಯ ಆಹಾರ ಸರಪಳಿಗೂ ಹೊಡೆತ ನೀಡುತ್ತಿರುವುದು ಸ್ಪಷ್ಟವಾಗಿದೆ.

You may also like

Leave a Comment