Home ಶಿಕ್ಷಣಪುತ್ತಿಲ ಕುಟುಂಬದ ಕೀರ್ತಿ ಹೆಚ್ಚಿಸಿದ ಚಿನ್ಮಯಿ – ದ್ವಿತೀಯ ಪಿಯುಸಿಯಲ್ಲಿ ಶ್ರೇಷ್ಠ ಸಾಧನೆ

ಪುತ್ತಿಲ ಕುಟುಂಬದ ಕೀರ್ತಿ ಹೆಚ್ಚಿಸಿದ ಚಿನ್ಮಯಿ – ದ್ವಿತೀಯ ಪಿಯುಸಿಯಲ್ಲಿ ಶ್ರೇಷ್ಠ ಸಾಧನೆ

by anamika

ಪುತ್ತೂರಿಗೆ ಕೀರ್ತಿ ತಂದ ಪುತ್ತಿಲರಪುತ್ರಿ: ಶೇ. 98 ಅಂಕಗಳೊಂದಿಗೆ ಚಿನ್ಮಯಿ ಮಿಂಚು!

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾಗಿರುವ, ಯುವಕರಿಗೆ ಪ್ರೇರಣೆಯಾದ ಸಮಾಜಸೇವಕ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರ ಪುತ್ರಿ ಕುಮಾರಿ ಚಿನ್ಮಯಿ ಪುತ್ತಿಲ ಅವರು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 98% ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಂಬಿಕಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಚಿನ್ಮಯಿ, ತನ್ನ ಪ್ರತಿಭೆಯಿಂದ ಶಿಕ್ಷಣ ಸಂಸ್ಥೆಗೆ ಮಾತ್ರವಲ್ಲದೆ ಪುತ್ತಿಲ ಕುಟುಂಬಕ್ಕೂ ಕೀರ್ತಿ ತಂದಿದ್ದಾಳೆ. ಇವರ ಈ ಸಾಧನೆಗೆ ಪುತ್ತೂರು ಭಾಗದ ಜನರು ಹಾಗೂ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಿನ್ಮಯಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲು ಶುಭ ಹಾರೈಸಿದ್ದಾರೆ.

You may also like

Leave a Comment