Home ರಾಜ್ಯಶ್ರೀ ಕೃಷ್ಣ ಕಲಾ ಕೇಂದ್ರ ಕಾಣಿಯೂರು ವತಿಯಿಂದ ನೃತ್ಯಾರ್ಚನೆ- ಮಾತೃ ಪೂಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕೃಷ್ಣ ಕಲಾ ಕೇಂದ್ರ ಕಾಣಿಯೂರು ವತಿಯಿಂದ ನೃತ್ಯಾರ್ಚನೆ- ಮಾತೃ ಪೂಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

by Editor

ಕಾಣಿಯೂರು: ಶ್ರೀ ಕೃಷ್ಣ ಕಲಾ ಕೇಂದ್ರ ಕಾಣಿಯೂರು ವತಿಯಿಂದ ಜ 25ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಲಿರುವ ಕಲಾ ಕೇಂದ್ರದ

4ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಾರ್ಚನೆ, ಮಾತೃಪೂಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. ಕಲಾ ಕೇಂದ್ರದ ಪೋಷಕರಾದ ಮಹೇಶ್ ಕಲ್ಪಡ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪೋಷಕರು, ಕಲಾ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿವ್ಯಾ ಅಜಿರಂಗಳ ಸ್ವಾಗತಿಸಿ, ನೃತ್ಯಗುರು ಗೋಪಾಲಕೃಷ್ಣ ವೀರಮಂಗಲರವರು ಕಾರ್ಯಕ್ರಮ ನಿರ್ವಹಿಸಿದರು.

You may also like

Leave a Comment