Home ಜಿಲ್ಲೆಸಮಾಜಕ್ಕೆ ಶಕ್ತಿ, ರಾಷ್ಟ್ರಕ್ಕೆ ಭದ್ರಬುನಾದಿ… ಸುಬ್ರಹ್ಮಣ್ಯ ಹಿಂದೂ ಸಂಗಮ ಕಾರ್ಯಕ್ರಮ ಯಶಸ್ವಿ

ಸಮಾಜಕ್ಕೆ ಶಕ್ತಿ, ರಾಷ್ಟ್ರಕ್ಕೆ ಭದ್ರಬುನಾದಿ… ಸುಬ್ರಹ್ಮಣ್ಯ ಹಿಂದೂ ಸಂಗಮ ಕಾರ್ಯಕ್ರಮ ಯಶಸ್ವಿ

“ಪಂಚ ಪರಿವರ್ತನೆ ಸಂಕಲ್ಪ ನಮ್ಮ ಮನೆಯಿಂದ ಆರಂಭಗೊಂಡು ರಾಷ್ಟ್ರ ನಿರ್ಮಾಣಕ್ಕೆ ಭದ್ರಬುನಾದಿ ಆಗುತ್ತದೆ” : ರವೀಂದ್ರ ಪುತ್ತೂರು

by Editor

ಸುಬ್ರಹ್ಮಣ್ಯ: ಹಿಂದೂ ಸಂಗಮ ಕಾರ್ಯಕ್ರಮದ ಪ್ರಾರಂಭದಲ್ಲಿ ಶೋಭಾಯಾತ್ರೆಗೆ ಶ್ರೀ ಶಾಂತಪ್ಪ ದೋಣಿಮನೆ ಶಂಖನಾದ ಮೊಳಗಿಸುವ ಮೂಲಕ ಹಾಗೂ ಶ್ರೀ ನಾರಾಯಣ ಭಟ್ ನೆರಳಗದ್ದೆ ತೆಂಗಿನಕಾಯಿ ಹೊಡೆಯುವ ಮೂಲಕ ಭವ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಂಚಾಲಕರಾದ ರವೀಂದ್ರ ಪುತ್ತೂರು ಮಾತನಾಡಿ,“ಪಂಚ ಪರಿವರ್ತನೆ ಸಂಕಲ್ಪ ನಮ್ಮ ಮನೆಯಿಂದ ಆರಂಭಗೊಂಡು ರಾಷ್ಟ್ರ ನಿರ್ಮಾಣಕ್ಕೆ ಭದ್ರಬುನಾದಿ ಆಗುತ್ತದೆ” ಎಂದು ತಿಳಿಸಿದರು.

ಅನಿವಾರ್ಯ ಕಾರಣಗಳಿಂದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳು (ಸುಬ್ರಹ್ಮಣ್ಯ ಮಠ) ಇಂದು ಕಾರ್ಯಕ್ರಮದಲ್ಲಿ ದೈಹಿಕವಾಗಿ ಉಪಸ್ಥಿತರಿರಲಿಲ್ಲ. ಆದರೂ ತಮ್ಮ ಸಂಕಲ್ಪ ಹಾಗೂ ಆಶೀರ್ವಾದದ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು (ಎಡನೀರು ಮಠ) ತಮ್ಮ ದಿವ್ಯ ಉಪಸ್ಥಿತಿಯಿಂದ ವೇದಿಕೆಗೆ ಮಂಗಲವನ್ನು ತಂದುಕೊಟ್ಟು,“ನಮ್ಮ ಮನೆ ಮನಸುಗಳು ರಾಷ್ಟ್ರದ ನೆಲೆಗಟ್ಟಿನಲ್ಲಿ ಗಟ್ಟಿಗೊಂಡು ಸದೃಢ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳಬೇಕು” ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲೂ ಸಂಪೂರ್ಣ ಸಹಕಾರ ನೀಡಿದ ಸುಬ್ರಹ್ಮಣ್ಯ ಮಠದ ದಿವಾನರಾದ ಶ್ರೀ ಸುದರ್ಶನ ಜೋಯಿಸರು ಗೋ ಪೂಜೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಮುಖರು:

ಶ್ರೀ ಅಶೋಕ ಮೂಲೆಮಜಲು (ಸದಸ್ಯರು, ಹಿಂದೂ ಸಂಗಮ ಆಯೋಜನ ಸಮಿತಿ),ಶ್ರೀ ನಾರಾಯಣ ಭಟ್ ನೆರಳಗದ್ದೆ, ಶ್ರೀ ನಾರಾಯಣ ಮನಾಡು, ಶ್ರೀಮತಿ ಪುಷ್ಪಾವತಿ ಬಾಲಡಿ, ಶ್ರೀ ಗುರುಪ್ರಸಾದ್ ಮೇಲ್ನಾಡು, ಶ್ರೀ ರಮೇಶ್ ಕೋನಡ್ಕ, ಶ್ರೀಮತಿ ಹರಿಣಾಕ್ಷಿ ಮಾನಿಬೈಲು (ಧರ್ಮಸ್ಥಳ ಸಂಘ),ಶ್ರೀ ಗೋಪಾಲಕೃಷ್ಣ ಭಟ್ ಪಂತಾರು, ಶ್ರೀಮತಿ ಲತಾ ನೋಚಿಲ (ಒಡಿಯೂರು ಸಂಘ),ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರಾದ ಶ್ರೀಮತಿ ಲೀಲಾವತಿ ಪರಮಲೆ, ಶ್ರೀಮತಿ ವೀಣಾ ಪಲ್ಲಿಗದ್ದೆ, ಶ್ರೀ ಚಂದ್ರ ಗುಂಡಡ್ಕ ಉಪಸ್ಥಿತರಿದ್ದರು.

ಪ್ರಸ್ತಾವಿಕ ಮಾತುಗಳನ್ನು ಶ್ರೀ ದಿಲೀಪ್ ಉಪ್ಪಳಿಕೆ (ಸಂಯೋಜಕರು, ಹಿಂದೂ ಸಂಗಮ ನಿರ್ವಹಣಾ ಸಮಿತಿ ಸುಬ್ರಹ್ಮಣ್ಯ) ನೆರವೇರಿಸಿದರು. ಸ್ವಾಗತ ಭಾಷಣವನ್ನು ರೋಹಿತ್ ಕುಲ್ಕುಂದ ಮಾಡಿದರು. ಧನ್ಯವಾದ ಸಮರ್ಪಣೆಯನ್ನು ಶ್ರೀ ದಿನೇಶ್ ಸಂಪ್ಯಾಡಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೋಹಿತ್ ಜೇನುಕೋಡಿ ಹಾಗೂ ಕುಮಾರಿ ಕೀರ್ತಿ ನೂಚಿಲ ನಿರ್ವಹಿಸಿದರು. ಇದಲ್ಲದೆ, ಸ್ಥಳೀಯ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಭಿಕರನ್ನು ರಂಜಿಸಿತು.

You may also like

Leave a Comment