ಮಂಗಳೂರು–ಬೆಂಗಳೂರು ವಂದೇ ಭಾರತ್ ಪ್ರಯಾಣಿಕರ ಸಂಖ್ಯೆ ಕುಸಿತ; ಭಾರೀ ನಷ್ಟದಲ್ಲಿ ರೈಲು ಸೇವೆ
ಮಂಗಳೂರು, ಜೂ. 2: ಮಂಗಳೂರು–ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಯಾಣಿಕರ ಸ್ಪಂದನೆ ಕಡಿಮೆಯಾಗುತ್ತಿರುವುದು ರೈಲ್ವೆ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪ್ರತಿ ಟ್ರಿಪ್‌ಗೆ ಸುಮಾರು ₹4.54 ಲಕ್ಷ ಆದಾಯ ಗಳಿಸಬೇಕಾದ ರೈಲು, ನಿರೀಕ್ಷಿತ ಮಟ್ಟದ ಆದಾಯ ತಂದುಕೊಡಲು ವಿಫಲವಾಗುತ್ತಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಮಾಹಿತಿ ಪ್ರಕಾರ, ಜೂನ್ 3ರಿಂದ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದ್ದು, ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ವೇಳಾಪಟ್ಟಿ ಜಾರಿಯಲ್ಲಿ ವಿಳಂಬವಾಗಿರುವುದಾಗಿ ತಿಳಿದುಬಂದಿದೆ.

ಪ್ರಸ್ತುತ ರೈಲಿನ ಸರಾಸರಿ ಭರ್ತಿದರ ಕೇವಲ 55 ಶೇಕಡಾ ಮಾತ್ರವಾಗಿದೆ. ರೈಲಿನಲ್ಲಿ ಒಟ್ಟು 57 ಸುತ್ತುಗಳು, 258 ಸೇವೆಗಳು ಹಾಗೂ 108 ಟ್ರಿಪ್‌ಗಳ ಕಾರ್ಯಾಚರಣೆಯಿಂದ ಸಾಕಷ್ಟು ಆದಾಯ ಸಂಗ್ರಹವಾಗದಿರುವುದು ಗಮನಾರ್ಹವಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ, ಸಂಪರ್ಕ ವ್ಯವಸ್ಥೆ ಸುಧಾರಣೆ ಹಾಗೂ ಸೇವಾ ಗುಣಮಟ್ಟ ಹೆಚ್ಚಿಸುವ ಮೂಲಕ ವಂದೇ ಭಾರತ್ ರೈಲಿಗೆ ಮತ್ತೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನವನ್ನು ರೈಲ್ವೆ ಇಲಾಖೆ ಕೈಗೊಂಡಿದೆ.