ಕಡಬ ತಾಲೂಕು ಚಾರ್ವಾಕ ಗ್ರಾಮದ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಾಣಿಲ ದಲ್ಲಿ 77ನೇ ಗಣರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಿತು. ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಅವರು ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶೋಭಾ ಬಾಕಿಲ ವಹಿಸಿದ್ದರು. ಅತಿಥಿಗಳಾದ ಕೃಷ್ಣಕುಮಾರ್ ಶೆಟ್ಟಿ ನಿವೃತ್ತ ಬ್ಯಾಂಕ್ ಮೆನೇಜರ್ ಅವರು ದಿವಂಗತ ಸುಂದರಿ ಗಾಯತ್ರಿ ಎಸ್ಟೇಟ್ ಗುಜ್ಜರ್ಮೆ ಇವರ ಹೆಸರಿನಲ್ಲಿ ನೀಡಿದ ಶೋಕೇಸ್ ( ಪ್ರದರ್ಶನ ಕಪಾಟು ) ಉದ್ಘಾಟಿಸಿ ಶಾಲಾ ಅಭಿವೃದ್ಧಿಯಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದರು, ಶೋಕೇಸ್ ದಾನಿಗಳಾದ ಯುಪಿ ರಾಮಕೃಷ್ಣ ಗುಜ್ಜರ್ಮೆ ಮಾತನಾಡಿ ನಾಣಿಲ ಶಾಲೆಯು ಉತ್ತಮ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಮಾತನಾಡಿ, ಶಾಲಾ ಅಭಿವೃದ್ಧಿ ಸಮಿತಿಯು ಉತ್ತಮ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕಾಣಿಯೂರು ಕ್ಲಸ್ಟರ್ ಸಿ ಆರ್, ಪಿ, ದೇವಪ್ಪ ಅವರು ಮಾತನಾಡಿ ಶಿಕ್ಷಣ ಇಲಾಖೆಯು ಶಾಲೆಯ ಉತ್ತಮ ಕೆಲಸಕ್ಕೆ ಸದಾ ನಿಮ್ಮೊಂದಿಗಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಣಿಯೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಂಗಮ್ಮ ಗುಜ್ಜರ್ಮೆ, ಪಂಚಾಯತ್ ಸದಸ್ಯರುಗಳಾದ ತೇಜಕುಮಾರಿ ಉದಲದ್ದ, ಸುಲೋಚನಾ ಮಿಯೋಲ್ಪೆ, ಚಾರ್ವಾಕ ಶಾಲೆಯ ಮುಖ್ಯ ಗುರುಗಳಾದ ರಮೇಶಿ ಸರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನೂತನ್ ಭಟ್, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಪೋಷಕರು, ಮಕ್ಕಳು, ಊರಿನ ಗಣ್ಯರು ಭಾಗವಹಿಸಿದ್ದರು .ಶಾಲಾ ಮುಖ್ಯ ಗುರುಗಳಾದ ಪದ್ಮಯ ಗೌಡ ವರದಿ ವಚನ ಮಂಡಿಸಿದರು, ಸಹ ಶಿಕ್ಷಕಿಯಾದ ಮೋಹಿನಿ ಎನ್ ಸ್ವಾಗತಿಸಿ, ಗೌರವ ಶಿಕ್ಷಕಿಯರಾದ ಶಿಶ್ಮಿತಾ ರೈ ಹಾಗೂ ಸುಮಲತಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು, ಸಹ ಶಿಕ್ಷಕಿ ನಂದಿನಿ ಧನ್ಯವಾದ ಅರ್ಪಿಸಿದರು. ಪುಟಾಣಿಗಳಾದ ಜಯಲಕ್ಷ್ಮಿ, ಶೌರ್ಯ, ವರ್ಷಿಕ ಡಿ, ವಿ ವರ್ಣಿಕ ಡಿ, ವಿ, ಪ್ರಾರ್ಥಿಸಿದರು, ಸಹ ಶಿಕ್ಷಕರಾದ ಸುನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು .