Home ಬ್ರೇಕಿಂಗ್ ನ್ಯೂಸ್ಶಬರಿಮಲೆ ಗರ್ಭಗುಡಿ ಚಿನ್ನ ನಾಪತ್ತೆ ಪ್ರಕರಣ: ‘ಕಾಂತಾರ’ ಖ್ಯಾತಿಯ ನಟನಿಗೆ ಎಸ್‌ಐಟಿ ಶಾಕ್!

ಶಬರಿಮಲೆ ಗರ್ಭಗುಡಿ ಚಿನ್ನ ನಾಪತ್ತೆ ಪ್ರಕರಣ: ‘ಕಾಂತಾರ’ ಖ್ಯಾತಿಯ ನಟನಿಗೆ ಎಸ್‌ಐಟಿ ಶಾಕ್!

by Editor

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿಯ ಚಿನ್ನದ ಕವಚ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಖ್ಯಾತ ನಟ ಜಯರಾಮ್ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿರುವುದು ತೀವ್ರ ಸಂಚಲನ ಮೂಡಿಸಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಜಯರಾಮ್ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವಿಡಿಯೋ ಲಭ್ಯವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಯೊಂದಿಗೆ ನಟನಿಗಿದ್ದ ಆಪ್ತ ಸಂಬಂಧ ಮತ್ತು ಸಂಶಯಾಸ್ಪದ ಹಣಕಾಸಿನ ವಹಿವಾಟುಗಳ ಬಗ್ಗೆ ಅಧಿಕಾರಿಗಳು ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

You may also like

Leave a Comment