83
ದೇಲಂಪಾಡಿ: ಸನಾತನ ಧರ್ಮದ ಪರಂಪರೆ ಮತ್ತು ಏಕತೆಯ ಭಾವನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ದೇಲಂಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ‘ಹಿಂದೂ ಹೃದಯ ಸಂಗಮ’ ಸಮಾಜೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಉತ್ಸವವು ಯುವ ಪೀಳಿಗೆಗೆ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಗುರಿ ಹೊಂದಿದೆ.
